ಮೂಡುಬಿದಿರೆಗೆ ಆಗಮಿಸಿದ ಕೇರಳದ ಶ್ರೀರಾಮ ನವಮಿ ರಥಯಾತ್ರೆ

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆಗೆ ಆಗಮಿಸಿದ ಕೇರಳದ ಶ್ರೀರಾಮ ನವಮಿ ರಥಯಾತ್ರೆ
 ಮೂಡುಬಿದಿರೆ : 
ಕೇರಳದ ಮಲ್ಲಪುರಂ ಜಿಲ್ಲೆಯ ಆಂಜನೇಯ ಆಶ್ರಮದ ವಾರ್ಷಿಕ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಶ್ರೀರಾಮ ನವಮಿ ರಥಯಾತ್ರೆ ಮೂಡುಬಿದಿರೆಗೆ ಮಂಗಳವಾರ ಆಗಮಿಸಿದ್ದು, ಅಲಂಗಾರಿನಲ್ಲಿ ಸಾಯಂಕಾಲ ಭಕ್ತಿಪೂರ್ವಕ ಸ್ವಾಗತ ದೊರೆಯಿತು.
ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಜೈನಮಠದಲ್ಲಿ ಧರ್ಮ ಸಂದೇಶ ನೀಡಿ ರಾಮ ದೇವರ ಆದರ್ಶಗಳು ಸರ್ವೋತ್ತಮವಾಗಿದ್ದು, ಇಂದಿನ ಸಮಾಜದಲ್ಲಿ ಅವುಗಳ ಮಹತ್ವ ಹೆಚ್ಚಿದೆ. ವಿಶ್ವಶಾಂತಿಯ ದೃಷ್ಟಿಯಿಂದ ಇಂತಹ ಧಾರ್ಮಿಕ ರಥಯಾತ್ರೆಗಳು ಹೆಚ್ಚಾಗಲಿ ಎಂದು ಆಶಿಸಿದರು.

ಆಂಜನೇಯ ಆಶ್ರಮದ ಸ್ವಾಮಿ ಹನುಮದ್ ಸದಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ ರಥಯಾತ್ರೆಯ ವೈಶಿಷ್ಟö್ಯ, ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು. 6ನೇ ವರ್ಷಯಾತ್ರೆಯಾಗಿದ್ದು, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಸಂಚರಿಸಿ ಧರ್ಮಜಾಗೃತಿಯನ್ನು ಉಂಟುಮಾಡಲು ಶ್ರಮಿಸುತ್ತಿದೆ ಎಂದರು.

ಸ್ವಾಮೀಜಿ ಅವರ ಮಾರ್ಗದರ್ಶನ ಹಾಗೂ ಶ್ರೀರಾಮ ನವಮಿ ರಥಯಾತ್ರೆ ಮತ್ತು ಸಮಿತಿ ಸಂಚಾಲಕ ಎಂ. ದಯಾನಂದ ಪೈ ಅವರ ನೇತೃತ್ವದಲ್ಲಿ
ರಥದಲ್ಲಿದ್ದ ಶ್ರೀರಾಮದೇವರ ಮೂರ್ತಿಗೆ ಸ್ವಾಮೀಜಿ ಮಾಲಾರ್ಪಣೆ ಮಾಡಿ, ಪ್ರಾರ್ಥನೆ ಸಲ್ಲಿಸಲಾಯಿತು.

ಅಲಂಗಾರಿನಿಂದ ಮೂಡುಬಿದಿರೆ ಜೈನಮಠದವರೆಗೆ ಶೋಭಾಯಾತ್ರೆ ನಡೆಯಿತು. 

 
ಪ್ರಮುಖರಾದ ಎಂ. ರಾಘುವೇಂದ್ರ ಭಂಡಾರ್ಕರ್, ಕೆ. ಶಿವ ಭಂಡಾರ್ಕರ್, ಸುಧೀರ್ ನಾಯ್ಕ್, ಗಣೇಶ್ ಮಲ್ಯ, ಎಂ. ಶಾತರಾಮ ಕುಡ್ವ, ಮಠದ ವ್ಯವಸ್ಥಾಪಕ ಸಂಜಯತ್ ಕುಮಾರ್, ಎಸ್.ಪಿ. ವಿದ್ಯಾ ಕುಮಾರ್, ಗಣೇಶ್ ಪೈ ಅಲಂಗಾರು, ಸದಾಶಿವ ಶೆಟ್ಟಿ ಅಲಂಗಾರು, ಕಿಶೋರ್ ಭಂಡಾರಿ, ಭರತ್ ಶೆಟ್ಟಿ, ಮಂಜುನಾಥ ಪೈ, ಗಣೇಶ್ ನಾಯ್ಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Post a Comment

0 Comments