ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗ ವಾಹನ ಪಾಕಿ೯ಂಗ್ : ಕ್ರಮಕೈಗೊಳ್ಳಲು ಆಗ್ರಹ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗ ವಾಹನ ಪಾಕಿ೯ಂಗ್ : ಕ್ರಮಕೈಗೊಳ್ಳಲು ಆಗ್ರಹ

ಮೂಡುಬಿದಿರೆ : ತಾಲೂಕಿನ ಸಮುದಾಯ ಅರೋಗ್ಯ ಕೇಂದ್ರದ ಮುಂಭಾಗದ ರಸ್ತೆಯಲ್ಲಿ ಶಾಂತಿ ಪ್ರಸಾದ್ ಹೆಗ್ಡೆ ಎಂಬ ವ್ಯಕ್ತಿಯೋವ೯ರು ತಮ್ಮ ವಾಹನವನ್ನು ಪಾಕಿ೯ಂಗ್ ಮಾಡುತ್ತಿರುವುದರಿಂದ ಆರೋಗ್ಯ ಕೇಂದ್ರಕ್ಕೆ ಬರುವವರಿಗೆ ತೊಂದರೆಯಾಗುತ್ತಿದ್ದು ಈ ಕ್ರಮಕೈಗೊಳ್ಳಲು ಪೊಲೀಸರಿಗೆ ಸೂಚಿಸುವಂತೆ ಕೆಪಿಸಿಸಿ ಸಂಯೋಜಕ, ವಕೀಲ ಪದ್ಮಪ್ರಸಾದ್ ಜೈನ್ ಅವರು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. 
ಆಸ್ಪತ್ರೆಯ ಮುಂಭಾಗದಲ್ಲಿರುವ ವಾಣಿಜ್ಯ ಕಟ್ಟಡದಲ್ಲಿ ಶಾಂತಿ ಪ್ರಸಾದ್ ಹೆಗ್ಡೆ ಅವರ ಕಚೇರಿಯಿದ್ದು, ಅವರು ತನ್ನ ವಾಹನವನ್ನು ಇಡೀ ದಿನ ಆಸ್ಪತ್ರೆ ಎದುರಿಗೆ ಪಾರ್ಕಿಂಗ್ ಮಾಡಿ ಹೋಗುತ್ತಿದ್ದಾರೆ. ಸದ್ರಿ ಸ್ಥಳದಲ್ಲಿ ನೋ-ಪಾಕಿ೯ಂಗ್ ಸ್ಥಳವಾಗಿದ್ದು ಹೊರಗಿನ ಖಾಸಗಿ ವಾಹನ ನಿಲ್ಲಿಸಲು ನಿಷೇಧಿಸಲಾಗಿದೆ ಎಂಬುದಾಗಿ ಬೋರ್ಡ್ ಇದ್ದರೂ ಈ ವ್ಯಕ್ತಿ ದುರಂಕಾರ ದಿಂದ ವರ್ತಿಸುತ್ತಾನೆ. 

ಆಸ್ಪತ್ರೆಯ ಅಧಿಕಾರಿಗಳು. ಸಿಬ್ಬಂದಿಗಳೊಂದಿಗೆ ದರ್ಪ ದಿಂದ ಮಾತಾಡುತ್ತಿದ್ದು ಇದರಿಂದ ಸರಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ತೊಂದರೆ ಆಗುತ್ತಿದೆ. ಆದುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಹಾಗು KA-19 MB 9811 ಸದ್ರಿ ವಾಹನಗಳನ್ನು ಪೊಲೀಸ್‌ ಇಲಾಖೆ ಯಿಂದ ಸೀಜ್ ಮಾಡಲು ಆದೇಶ ನೀಡುವಂತೆ ಸಾರ್ವಜನಿಕರ ಪರವಾಗಿ ಆಗ್ರಹಿಸಿದ್ದಾರೆ.

Post a Comment

0 Comments

Advertisement