ಗಾಂಧಿನಗರ ಶಾಲೆಯಲ್ಲಿ ಶೂನ್ಯ ತ್ಯಾಜ್ಯ ಮೆಟ್ರಿಕ್ ಮೇಳ

ಜಾಹೀರಾತು/Advertisment
ಜಾಹೀರಾತು/Advertisment
ಗಾಂಧಿನಗರ ಶಾಲೆಯಲ್ಲಿ ಶೂನ್ಯ ತ್ಯಾಜ್ಯ ಮೆಟ್ರಿಕ್ ಮೇಳ 
 ಮೂಡುಬಿದಿರೆ : 
ಪುರಸಭೆ ವ್ಯಾಪ್ತಿಯ ಗಾಂಧಿನಗರದಲ್ಲಿರುವ ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ-ಮೆಟ್ರಿಕ್ ಮೇಳವು ಶೂನ್ಯತ್ಯಾಜ್ಯ ಪರಿಕಲ್ಪನೆಯಲ್ಲಿ ನಡೆದು ಗಮನಸೆಳೆಯಿತು. 
ವಿದ್ಯಾರ್ಥಿಗಳು ಏಕಬಳಕೆಯ ಪ್ಲಾಸ್ಟಿಕ್ ಚೀಲಗಳ ಬದಲಾಗಿ ಬಟ್ಟೆ ಚೀಲಗಳಲ್ಲಿ ವಸ್ತುಗಳನ್ನು ತುಂಬಿಸಿ ಗ್ರಾಹಕರಿಗೆ ನೀಡುವುದು ಕಂಡುಬಂತು. ಮನೆಯಲ್ಲೇ ಬೆಳೆದ ತರಕರಿ ಹಣ್ಣು, ಹಂಪಲು, ಸೊಪ್ಪು, ಮನೆಯಲ್ಲೇ ತಯಾರಿಸಿದ ತಿಂಡಿ ತಿನಿಸುಗಳನ್ನು ವಿದ್ಯಾರ್ಥಿಗಳು ವ್ಯಾಪಾರಕ್ಕೆ ಇಟ್ಟಿದ್ದರು. ಚರುಬುರಿ, ಪಾನಿಪುರಿ ಸಹಿತ ತಿಂಡಿಗಳನ್ನು ಎಲೆಗಳಿಂದ ಮಾಡಿದ ಬೌಲ್ ಹಾಗೂ ಸ್ಟಿಲ್ ತಟ್ಟೆಗಳಲ್ಲಿ ನೀಡಿದರು. ಜ್ಯೂಸ್‌ಗಳನ್ನು ತಮ್ಮ ಗ್ರಾಹಕರಿಗೆ ಸ್ಟೀಲ್ ಲೋಟಗಳಲ್ಲಿ ನೀಡಿದರು. ವಿದ್ಯಾರ್ಥಿಗಳು ವಸ್ತುಗಳನ್ನು ಬಟ್ಟೆ ಚೀಲ, ಗೋಣಿ ಚೀಲಗಳಲ್ಲೇ ತಂದು ಮಾರಾಟ ಮಾಡಿರುವುದು ವಿಶೇಷವಾಗಿತ್ತು. ಊರಿನ ತರಕಾರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಭರ್ಜರಿ ವ್ಯಾಪಾರ ನಡೆಯಿತು. 
  ಪುರಸಭೆ ಪರಿಸರ ಅಭಿಯಂತರೆ ಶಿಲ್ಪಾ ಎಸ್. ಮಕ್ಕಳ ಸಂತೆಯಲ್ಲಿ ಭಾಗವಹಿಸಿ ಮಾತನಾಡಿ, ಮನೆಯಲ್ಲಿ ಹಾಗೂ ದಿನನಿತ್ಯದ ಚಟುವಟಿಕೆಯಲ್ಲಿ ಏಕಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧಿಸುವುದು, ಶೂನ್ಯ ತ್ಯಾಜ್ಯವನ್ನು ಜೀವನದಲ್ಲಿ ಹೇಗೆ ಅಳವಡಿಸಬೇಕೆನ್ನುವುದನ್ನು ವಿವರಿಸಿದರು. 

ಪುರಸಭೆ ಸಹಕಾರದೊಂದಿಗೆ ಸಾಹಸ್ ಸಂಸ್ಥೆ-ಎಚ್‌ಡಿಎಫ್ ಅವರು 50ಕ್ಕೂ ಅಧಿಕ ಚೀಲಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದರು. 
 
ಸಾಹಸ್ ಎನ್‌ಜಿಒ ಪ್ರತಿನಿಧಿ ಶ್ರವಣ್, ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ ಶೆಟ್ಟಿ, ಮುಖ್ಯ ಶಿಕ್ಷಕಿ ಕಸ್ತೂರಿ ಎಚ್., ಶಿಕ್ಷಕಿಯರಾದ ಭವ್ಯಾ, ಸುಪ್ರಿತಾ, ಅಕ್ಷತಾ, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಹಳೇ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Post a Comment

0 Comments