ಮಾರ್ನಾಡು ಶ್ರೀ ಕ್ಷೇತ್ರ ಹೊಯ್ಪಾಲಬೆಟ್ಟದಲ್ಲಿ ಅನ್ನಛತ್ರ ಶ್ರೀ ಕುಂಭಕಂಠಿನಿ ಸಭಾಗೃಹ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment
ಮಾರ್ನಾಡು ಶ್ರೀ ಕ್ಷೇತ್ರ ಹೊಯ್ಪಾಲಬೆಟ್ಟದಲ್ಲಿ ಅನ್ನಛತ್ರ ಶ್ರೀ ಕುಂಭಕಂಠಿನಿ ಸಭಾಗೃಹ ಉದ್ಘಾಟನೆ
ಮೂಡುಬಿದಿರೆ : ಮಾರ್ನಾಡು ಶ್ರೀ ಕ್ಷೇತ್ರ ಹೊಯ್ಪಾಲಬೆಟ್ಟದಲ್ಲಿ ಸುಮಾರು ಇಪ್ಪತು ಲಕ್ಷ ರೂಪಾಯಿ ವೆಚ್ಚದಲ್ಲಿ ದಾನಿಗಳ ನೆರವಿನಿಂದ ನಿರ್ಮಾಣವಾದ ನೂತನ ಅನ್ನಛತ್ರ ಶ್ರೀ ಕುಂಭಕಂಠಿನಿ ಸಭಾಗೃಹ ವನ್ನು
ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ರಾಜೇಶ್ ಬಲ್ಲಾಳ್ ದೀಪ ಬೆಳಗಿಸಿ ಉದ್ಘಾಟಿಸಿದರು.

 ಗ್ರಾಮದ ಅಸ್ರಣ್ಣರಾದ ಅನಂತ ಪದ್ಮನಾಭ ಅಸ್ರಣ್ಣ ರವರು ಆಶೀರ್ವಚನಗೈದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ಉದ್ಯಮಿ ಹೇಮರಾಜ್ ರಾವ್ , ಮುಂಬೈ ಉದ್ಯಮಿ ಶೇಖರ್ ಸಿದ್ದು ಶೆಟ್ಟಿ ಕೆಂಪುಲು, ಪಡುಮಾರ್ನಾಡು ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ವಾಸುದೇವ ಭಟ್, ಉದ್ಯಮಿಗಳಾದ ಸದಾಶಿವ ಶೆಟ್ಟಿ ಕುಡ್ಡ, ವಸಂತ ಹೆಗ್ಡೆ, ಕೃಷಿಕರಾದ ಪಾಪಣ್ಣ ಪೂಜಾರಿ, ಶಂಭು ಶೆಟ್ಟಿ ಮಾರೂರು, ಎಂಜಿನಿಯರ್ ಸತೀಶ್ .ಎ .ಆರ್, ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ಯೋಜನಾಧಿಕಾರಿ ಬಿ ಧನಂಜಯರವರು ಭಾಗವಹಿಸಿ ಶುಭಹಾರೈಸಿದರು.

ಸಂಕ್ರಮಣ ದಿನದ ಅನ್ನಸಂತರ್ಪಣಾ ದಾನಿ ಹಾಗೂ ಅತೀ ಹೆಚ್ಚಿನ ದೇಣಿಗೆ ನೀಡಿದ ಶೇಖರ್ ಶೆಟ್ಟಿ ಕೆಂಪುಲು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ
ರಮೇಶ್ ಎಸ್ ಶೆಟ್ಟಿ ಸ್ವಾಗತಿಸಿದರು. ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಎ. ಯತೀಂದ್ರ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments