ಮೂಡುಬಿದಿರೆ : ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಮತ್ತು ತಾಲೂಕಿನ 12 ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಈ ಬಾರಿ ನೀರಿನ ಸಮಸ್ಯೆ ಕಾಡದು.
ಕರಾವಳಿಯಲ್ಲಿ ಕಳೆದ ವಷ೯ ಅಧಿಕ ಮಳೆ ಸುರಿದಿರುವುದರಿಂದ ಇಲ್ಲಿನ ನದಿಗಳು ತುಂಬಿಕೊಂಡಿವೆ. ಪುಚ್ಚಮೊಗರುನಲ್ಲಿರುವ ಫಲ್ಗುಣಿ ನದಿಯಿಂದ ಮೂಡುಬಿದಿರೆ ಪುರಸಭೆ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ.
ಮೂಡುಬಿದಿರೆ ತಾಲೂಕು ಮತ್ತು ಬಂಟ್ವಾಳ ತಾಲೂಕಿನ ಗಡಿ ಭಾಗದಲ್ಲಿರುವ ಪುಚ್ಚಮೊಗರು ನದಿಯಿಂದ ಎರಡೂ ತಾಲೂಕಿಗೂ ನೀರು ಪೂರೈಕೆಯಾಗುತ್ತಿದೆ. ನದಿಯಲ್ಲಿ ನೀರು ತುಂಬಿಕೊಂಡಿರುವುದರಿಂದಮೇ ತಿಂಗಳ ವರೆಗೆ ನೀರಿನ ಸಮಸ್ಯೆ ಕಾಡದು.
ತಾಲೂಕಿನಲ್ಲಿರುವ 12 ಗ್ರಾಮ ಪಂಚಾಯತ್ ಗಳಲ್ಲಿ ಹೊಸಬೆಟ್ಟು ಪಂಚಾಯತ್ ವ್ಯಾಪ್ತಿಯ ಗಾಜಿಗಾರ ಪಲ್ಕೆಯಲ್ಲಿರುವ ಪರಿಶಿಷ್ಟ ಪಂಗಡದ ಕಾಲನಿಯಲ್ಲಿರುವ ಬೋರ್ ವೆಲ್ ನಲ್ಲಿ ನೀರು ಕಡಿಮೆಯಾಗಿರುವುದರಿಂದ ಸಮಸ್ಯೆಯಾಗಿದೆ.
ಬೆಳುವಾಯಿ ಗ್ರಾಮ ಪಂಚಾಯತ್ ನ ಪೆಲಕುಂಜ ವಾಡಿ೯ನಲ್ಲಿ, ಪಾಲಡ್ಕ ಪಂಚಾಯತ್ ನ ಪೂಪಾಡಿಕಲ್ಲಿನಲ್ಲಿ, ತೆಂಕಮಿಜಾರು ಪಂಚಾಯತ್ ಕೊಂಡೆಬೆಟ್ಟುವಿನಲ್ಲಿ ಜೆಜೆಎಂ ಸಂಪಕ೯ದಲ್ಲಿ ತೊಂದರೆಯಾಗಿರುವುದರಿಂದ ಎತ್ತರ ಪ್ರದೇಶದಲ್ಲಿರುವ ಮನೆಗಳಿಗೆ ನಿಧಾನಗತಿಯಲ್ಲಿ ನೀರು ಪೂರೈಕೆಯಾಗುತ್ತಿದ್ದು ಜನರು ಸ್ವಲ್ಪಮಟ್ಟಿನ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ತೋಡಾರಿನಲ್ಲಿ ರಾ. ಹೆ. ಕಾಮಗಾರಿಯಿಂದಾಗಿ ಸಮಸ್ಯೆಯಾಗಿದೆ.
ಉಳಿದ ಗ್ರಾಮ ಪಂಚಾಯತ್ ಗಳಾದ ಶಿತಾ೯ಡಿ, ವಾಲ್ಪಾಡಿ, ನೆಲ್ಲಿಕಾರು, ದರೆಗುಡ್ಡೆ, ಪಡುಮಾನಾ೯ಡು, ಕಲ್ಲಮುಂಡ್ಕುರು, ಪುತ್ತಿಗೆ ಹಾಗೂ ಇರುವೈಲಿನಲ್ಲಿರುವ ಗ್ರಾಮಸ್ಥರಿಗೆ ಈವರೆಗೆ ಕುಡಿಯುವ ನೀರಿಗೆ ತೊಂದರೆಯಾಗಿಲ್ಲ.
ಕೆಲವು ಪಂಚಾಯತ್ ಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಪೂರೈಕೆಯಾಗುತ್ತಿರುವುದರಿಂದ ಈ ವಷ೯ ನೀರಿನ ತೊಂದರೆ ಬಾರದು.
ವರದಿ : ಪ್ರೇಮಶ್ರೀ ಕಲ್ಲಬೆಟ್ಟು.
---=-----------------------
ಪುಚ್ಚಮೊಗರು ನದಿಯಲ್ಲಿ ನೀರು ಇರುವುದರಿಂದ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರಿನ ಸಮಸ್ಯೆ ಏಪ್ರಿಲ್, ಮೇ ತಿಂಗಳವರೆಗೆ ಬಾರದು. ಸಮಸ್ಯೆಯ ಬಗ್ಗೆ ಸೂಚನೆ ಕಂಡು ಬಂದರೆ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುವುದು ಮತ್ತು ಟ್ಯಾಂಕರ್ ಮೂಲಕ ಮನೆ ಮನೆಗೆ ನೀರಿನ ವ್ಯವಸ್ಥೆ ಮಾಡಲಾಗುವುದು ಆದರೆ ಬೇಗ ಮಳೆ ಬಂದರೆ ಯಾವುದೇ ಸಮಸ್ಯೆಯಾಗದು : ಇಂದು ಎಂ. (ಮುಖ್ಯಾಧಿಕಾರಿಗಳು, ಮೂಡುಬಿದಿರೆ ಪುರಸಭೆ)
----=-------=---=====----


0 Comments