ಮೂಡುಬಿದಿರೆ : ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಇಲ್ಲಿ ವಿದ್ಯಾರ್ಥಿಗಳಿಂದ ಮಕ್ಕಳ ಸಂತೆ ಮತ್ತು ಮೆಟ್ರಿಕ್ ಮೇಳ ಕಾಯ೯ಕ್ರಮವು ಶುಕ್ರವಾರ ನಡೆಯಿತು.
ಪಡು ಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಯಾನಂದ ಪೈ ಶಾಲಾ ಸ್‌ಡಿಎಂಸಿ ಅಧ್ಯಕ್ಷ ಶ್ರೀ ರಮೇಶ ಆಚಾರ್ಯ ಸ್ಥಳೀಯ ನಿವಾಸಿ ಶ್ರೀ ಬಿ ವಿಶ್ವನಾಥ ಕಾಮತ್ ಎಮ್ ಸಿ ಎಸ್ ಬ್ಯಾಂಕ್ ಆಡಳಿತ ಮಂಡಳಿಯ ಸದಸ್ಯ ಶ್ರೀ ಜಾರ್ಜ್ ಮೋನಿಸ್, ಮೂಡುಬಿದಿರೆ ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪ ಗಿಡಗಳಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿದ್ಯಾರ್ಥಿಗಳು ತರಕಾರಿಗಳನ್ನು ,ಫ್ಯಾನ್ಸಿ ಐಟಂಗಳು ಸ್ಟೇಷನರಿ ಸಾಮಗ್ರಿಗಳು ತಿಂಡಿ ತಿನಿಸುಗಳು ಪಾನೀಯಗಳು ಮತ್ತು ಮೋಜಿನ ಆಟಗಳ ಮೂಲಕ ವ್ಯವಹಾರಗಳನ್ನು ನಡೆಸುವ ಜ್ಞಾನವನ್ನು ಪಡೆದುಕೊಂಡರು. ವಿದ್ಯಾರ್ಥಿಗಳು ವ್ಯಾಪಾರ ನಡೆಸುವಾಗ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ ಈ ಕಾರ್ಯಕ್ರಮವನ್ನು ಶೂನ್ಯ ತ್ಯಾಜ್ಯವನಾಗಿ ಪರಿವರ್ತಿಸಿದರು ಪೋಷಕರು ಮತ್ತು ಗ್ರಾಮಸ್ಥರು ಭಾಗವಹಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ಶೆಣೈ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು.


0 Comments