ಮಾ. 19-25 : ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಬಸದಿಯ ಮಹಾರಥಯಾತ್ರಾ ಮಹೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 *ಮಾ. 19-25 : ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಬಸದಿಯ ಮಹಾರಥಯಾತ್ರಾ ಮಹೋತ್ಸವ*

ಕಾರ್ಕಳ : ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಬಸದಿಯಲ್ಲಿ ಭಗವಾಗ್‌ 1008 ಶ್ರೀ ಅನಂತನಾಥ ಸ್ವಾಮಿ ಮತ್ತು ಶ್ರೀ ಬ್ರಹ್ಮಯಕ್ಷ ದೇವರ ಮಹಾರಥಯಾತ್ರಾ ಮಹೋತ್ಸವ ಮಾ. 19ರಿಂದ 25ರವರೆಗೆ ಜರುಗಲಿದೆ. 


ಮಾ. 19ರಂದು ಬೆಳಿಗ್ಗೆ 7.45ರಿಂದ ಇಂದ್ರ ಪ್ರತಿಷ್ಠೆ, ವಿಮಾನ ಶುದ್ಧಿ, ಯಕ್ಷ ಪ್ರತಿಷ್ಠೆ, ಶ್ರಿ ಬ್ರಹ್ಮಯಕ್ಷ ದೇವರ ಬಿಂಬ ಪೂರ್ವಾಭಿಮುಖ ಸ್ಥಾಪನೆಯಾಗಲಿದೆ. 11.55ಕ್ಕೆ ಧ್ವಜಾರೋಹಣ, ಮಹಾನೈವೇದ್ಯ ಪೂಜೆ, ಶ್ರೀ ಬಲಿ ಮಂಗಳಾರತಿ, ರಾತ್ರಿ 7 ಗಂಟೆಗೆ ಶ್ರೀಬಲಿ ವಿಧಾನ, ಉತ್ಸವ, ವಸಂತ ಕಟ್ಟೆ ಪೂಜೆ ನಡೆಯಲಿದೆ. 


ಪ್ರತಿನಿತ್ಯ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದ್ದು, *ಮಾ. 24ರಂದು ಮಹಾರಥಾಯಾತ್ರ ಮಹೋತ್ಸವ* ನಡೆಯಲಿದೆ. ಕಾರ್ಕಳ ದಾನಶಾಲೆ *ಶ್ರೀ ಜೈನ ಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ* ದಿವ್ಯ ಉಪಸ್ಥಿತಿಯಲ್ಲಿ ಬೆಳಿಗ್ಗೆ 8.15ರಿಂದ ಭಗವಾನ್‌ ಶ್ರೀ ಅನಂತನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿಗೆ ಕ್ಷೀರಾಭಿಷೇಕ, ಶ್ರೀ ಬ್ರಹ್ಮದೇವರಿಗೆ ಪಂಚಾಮೃತ ಅಭಿಷೇಕ, ಶ್ರೀ ಬಲಿವಿಧಾನ, ರಥ ಸಂಪ್ರೋಕ್ಷಣೆ, ಲಕ್ಷ ಹೂವಿನ ಪೂಜೆ, ರಥಾರೋಹಣಕ್ಕೆ ಪ್ರಸಾದ ಬೇಡಿಕೆ, ಮಧ್ಯಾಹ್ನ 12 ಗಂಟೆಗೆ ಮಹಾನೈವೇದ್ಯ ಪೂಜೆ, ಮಹಾಮಂಗಳಾರತಿ, ಶ್ರೀ ಸರ್ವಾಹ್ಣಯಕ್ಷನ ಶ್ರೀವಿಹಾರ, ಗ್ರಾಮ ಬಲಿ, *ಮಧ್ಯಾಹ್ನ 12-35ಕ್ಕೆ ಶ್ರೀ ಬ್ರಹ್ಮ ಯಕ್ಷ ದೇವರ ದರ್ಶನ ಪಾತ್ರಿಯೊಂದಿಗೆ ಭಗವಾನ್‌ ಶ್ರೀ ಅನಂತನಾಥ ಸ್ವಾಮಿಯ ರಥಾರೋಹಣ,* ಸಂಘ ಸಂತರ್ಪಣೆ, ಸಂಜೆ 6 ಗಂಟೆಗೆ ಸಮವಸರಣ ಪೂಜೆ, ರಾತ್ರಿ 10 ಗಂಟೆಗೆ ರಥೋತ್ಸವ, ಭಗವಾನ್‌ ಶ್ರೀ ಅನಂತನಾಥ ಸ್ವಾಮಿಗೆ 108 ಕಲಶಗಳಿಂದ ಮಹಾಭಿಷೇಕ, ಉತ್ಸವ ಮತ್ತು ಶ್ರೀಬಲಿ ವಿಧಾನ ನೆರವೇರಲಿದೆ ಎಂದು ಬಸದಿಯ ಪ್ರಕಟನೆ ತಿಳಿಸಿದೆ.

Post a Comment

0 Comments