ಮೂಡುಬಿದಿರೆ : ನಮ್ಮ ಸಾಮಾನ್ಯ ಜ್ಞಾನವನ್ನು ಅಭಿವೃದ್ಧಿ ಪಡಿಸಲು ಮತ್ತು ಜಗತ್ತಿನಲ್ಲಿ ನಡೆಯುವ ವಿಷಯಗಳನ್ನು ಓದಿ ತಿಳಿದುಕೊಳ್ಳಲು ಅರಿವು ಕೇಂದ್ರಗಳು ಸಹಕಾರಿ ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು.
ಅವರು ವಾಲ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಶಾಸಕರ ನಿಧಿ ರೂ. 14.50 ಲಕ್ಷ ಹಾಗೂ ಎಂಎಲ್ ಸಿ ಮಂಜುನಾಥ ಭಂಡಾರಿ ಅವರ ರೂ. 3.50 ಲಕ್ಷ ಅನುದಾನದಲ್ಲಿ ನಿಮಾ೯ಣಗೊಂಡಿರುವ 'ಅರಿವು ಕೇಂದ್ರ'ವನ್ನು ಲೋಕಾಪ೯ಣೆಗೊಳಿಸಿ ಮಾತನಾಡಿದರು.
ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ರುಕ್ಕಯ ಪೂಜಾರಿ, ನಿವೃತ್ತ ಶಿಕ್ಷಕ ರಾಜೇಂದ್ರ, ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷ ಗಣೇಶ್ ಬಿ. ಅಳಿಯೂರು ಹಾಗೂ ಪಂಚಾಯತ್ ನಲ್ಲಿ ಜನ ಸಾಮಾನ್ಯರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ಕಾಯ೯ದಶಿ೯ ಶೇಖರ್ ಅವರನ್ನು ಶಾಸಕರು ಸನ್ಮಾನಿಸಿದರು.
ತಾ. ಪಂಚಾಯತ್ ಸಹಾಯಕ ಕಾಯ೯ನಿವಾ೯ಹಣಾಧಿಕಾರಿ ಸಾಯೀಶ ಚೌಟ, ಗ್ಯಾರಂಟಿ ಅನುಷ್ಠಾನ ಯೋಜನೆಯ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಪ್ರದೀಪ್ ಕುಮಾರ್, ಶ್ರೀಧರ್ ಬಂಗೇರಾ, ಯಶೋಧ,ಭವಾನಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಗಣೇಶ್ ಬಿ. ಅಳಿಯೂರು ಸ್ವಾಗತಿಸಿ ಕಾಯ೯ಕ್ರಮ ನಿರೂಪಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಲಜ ವಂದಿಸಿದರು.


0 Comments