ಮೂಡುಬಿದಿರೆ ಕಂಬಳದಲ್ಲಿ ಪುರಸಭೆಯಿಂದ ಶೂನ್ಯ ತ್ಯಾಜ್ಯದ ಪರಿಕಲ್ಪನೆ : ನಮ್ಮಲ್ಲಿ ಪರಿಕಲ್ಪನೆ ಮೂಡೋದು ಯಾವಾಗ..?

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆ ಕಂಬಳದಲ್ಲಿ ಪುರಸಭೆಯಿಂದ ಶೂನ್ಯ ತ್ಯಾಜ್ಯದ ಪರಿಕಲ್ಪನೆ : ನಮ್ಮಲ್ಲಿ ಪರಿಕಲ್ಪನೆ ಮೂಡೋದು ಯಾವಾಗ..?
  ಮೂಡುಬಿದಿರೆ ಪುರಸಭೆಯು ಕಂಬಳದಲ್ಲಿ ಕಳೆದ ಐದು ವಷ೯ಗಳಿಂದ ಶೂನ್ಯ ತ್ಯಾಜ್ಯದ ಪರಿಕಲ್ಪನೆಯನ್ನು ಮೂಡಿಸುತ್ತಾ ಬರುತ್ತಿದೆ ಆದರೆ ಬುದ್ಧಿವಂತರ ಜಿಲ್ಲೆಯವರಾದ ನಮ್ಮಲ್ಲಿ ಆ ಪರಿಕಲ್ಪನೆ ಮೂಡೋದು ಯಾವಾಗ ಎಂಬ ಪ್ರಶ್ನೆ ದಟ್ಟವಾಗಿ ಬೆಳೆದು ನಿಂತಿದೆ..
 ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ., ಪರಿಸರ ಅಭಿಯಂತರೆ ಶಿಲ್ಪಾ, ಕಮ್ಯುನಿಟಿ ಮೊಬಿಲೈಸರ್ ಗಳು ಏಕ ಬಳಕೆಯ ಪ್ಲಾಸ್ಟಿಕ್ ಸಹಿತ ಇತರ ವಸ್ತುಗಳನ್ನು ಬಳಸದಂತೆ ವಿವಿಧ ರೀತಿಯಲ್ಲಿ ಕಳೆದ ಒಂದು ತಿಂಗಳಿನಿಂದ ಜಾಗೃತಿಯನ್ನು ಮೂಡಿಸುತ್ತಾ ಬಂದಿದ್ದಾರೆ. 
  ಅಲ್ಲದೆ ಸ್ವಚ್ಛ-ಸ್ವಸ್ಥ-ಸುಂದರ ಮೂಡುಬಿದಿರೆಯ ಕನಸನ್ನು ಕಾಣಲು ನಮ್ಮ ಜೊತೆಯಾಗಿರಿ ಎಂಬ ವಾಕ್ಯದೊಂದಿಗೆ ಕಂಬಳದಲ್ಲಿ ಸ್ಟಾಲೊಂದನ್ನು ಹಾಕಿ ಅದರಲ್ಲಿ ಏಕ ಬಳಕೆಯ ಪ್ಲಾಸ್ಟಿಕ್, ಪೇಪರ್ ವಸ್ತುಗಳನ್ನು ಬಳಸುವ ಬದಲಿಗೆ ಪರಿಸರ ಸ್ನೇಹಿ ವಸ್ತುಗಳ ಮಾರಾಟ ಮತ್ತು ಪ್ರದಶ೯ನ ಮಳಿಗೆಯನ್ನು ತೆರೆದು ಜಾಗೃತಿ ಮೂಡಿಸಲಾಗಿತ್ತು. 
  ಸ್ಟಾಲ್ ನ ಮಾಲಕರಿಗೆ ಅಡಿಕೆ ಹಾಳೆ, ಅಡಿಕೆ ಪ್ಲೇಟ್, ಬೌಲ್, ಬಿದಿರಿನ ಚಮಚ, ಫೋರ್ಕ್ ಹಾಗೂ ಬಯೋಡಿಗ್ರೇಡಬಲ್ ಕವರ್‌ಗಳನ್ನು ಬಳಸುವಂತೆ ಸೂಚನೆ ನೀಡಲಾಗಿತ್ತು ಅಲ್ಲದೆ ಕಸಗಳನ್ನು ಹಾಕಲು ಗೋಣಿ ಚೀಲಗಳನ್ನು ಸ್ಟಾಲ್ ಗಳ ಮುಂಭಾಗ, ಮರಗಳಿಗೆ ಮತ್ತು ಕಂಬಗಳಿಗೆ ಕಟ್ಟಿ ವ್ಯವಸ್ಥೆ ಮಾಡಲಾಗಿತ್ತು.
 ಕಷ್ಟಪಟ್ಟು ಇಷ್ಟೆಲ್ಲಾ ವ್ವವಸ್ಥೆಗಳನ್ನು ಪುರಸಭೆಯ ಅಧಿಕಾರಿಗಳು ಮಾಡಿದ್ದರೂ ಒಂದೆರಡು ಸ್ಟಾಲ್ ಗಳ ಮಾಲಕರು ಏಕ ಬಳಕೆಯ ಪ್ಲಾಸ್ಟಿಕ್ ಗಳಲ್ಲಿ ವಸ್ತುಗಳನ್ನು ಹಾಕಿಕೊಡುತ್ತಿದ್ದುದು ಕಂಡು ಬಂದಿದೆ. 
 ಕಂಬಳದ ಮೊದಲ ದಿನವಾದ ಶನಿವಾರದಂದು ಶೂನ್ಯ ತ್ಯಾಜ್ಯದ ಪರಿಕಲ್ಪನೆ ಯಶಸ್ವಿಯಾಗಿದ್ದರೂ ಆದಿತ್ಯವಾರದಂದು ಸ್ವಲ್ಪ ಸಡಿಲಿಕೆಯಾಗಿದೆ ಎನ್ನುವುದಕ್ಕೆ ಸೋಮವಾರ ಬೆಳಿಗ್ಗೆ ಪೌರಕಾಮಿ೯ಕರು ಕಂಬಳ ಕರೆಯ ಆವರಣದಲ್ಲಿ ಗುಡಿಸಿ ರಾಶಿ ಹಾಕಿದ ನೀರಿನ ಪ್ಲಾಸ್ಟಿಕ್ ಬಾಟಲಿಗಳು, ಐಸ್ ಕ್ರೀಮ್ ನ ಪ್ಲಾಸ್ಟಿಕ್ ಕವರ್ ಗಳು ಕಂಡು ಬಂದಿವೆ.
  ಮೂಡುಬಿದಿರೆಯ ಶಾಸಕ ಉಮಾನಾಥ ಕೋಟ್ಯಾನ್ ಪುರಸಭೆಯ ಅಧಿಕಾರಿಗಳಾದ ಇಂದು ಎಂ, ಶಿಲ್ಪಾ, ಸ್ವಚ್ಛತಾ ರಾಯಭಾರಿಗಳಾದ ಗೋಪಾಲ್ , ಸಂಧ್ಯಾ ಭಟ್, ನಿರಂಜನ್ ಕಮ್ಯೂನಿಟಿ ಮೊಬಿಲೈಸರ್ ಗಳು ಸ್ವಚ್ಛ-ಸ್ವಸ್ಥ-ಸುಂದರ ಮೂಡುಬಿದಿರೆಗಾಗಿ ತಮ್ಮ ಶಕ್ತಿ ಮೀರಿ ಶ್ರಮಿಸುತ್ತಾರೆ ಆದರೆ ಬುದ್ಧಿವಂತರಾಗಿರುವ ಜನರಿಗೆ ಇದು ಅಥ೯ವಾಗುವುದಿಲ್ಲವೆಂಬುದೇ ಬೇಸರದ ಸಂಗತಿ..
 ಮುಂದಿನ ವಷ೯ಗಳಲ್ಲಿ ನಡೆಯುವ ಕಂಬಳಗಳ ಸಂದಭ೯ದಲ್ಲಿ ಸಂಘಟಕರೇ ಪ್ರತಿಯೊಬ್ಬರಿಗೂ ರೂ. 25ರ ಒಂದೊಂದು ಬಟ್ಟೆಯ ಚೀಲಗಳನ್ನು ನೀಡಿ ನೀವು ತಿನ್ನುವ ತಿಂಡಿಗಳ ಪಾಕೆಟ್ ಗಳನ್ನು, ಕುಡಿಯುವ ನೀರಿನ ಬಾಟಲ್ ಗಳನ್ನು ಈ ಚೀಲಗಳಲ್ಲಿಯೇ ಹಾಕಿ ಇಲ್ಲಿಯೇ ಕೊಟ್ಟು ಹೋಗಿ ಎಂದು ಹೇಳಿದರೆ ಶೂನ್ಯ ತ್ಯಾಜ್ಯದ ಪರಿಕಲ್ಪನೆ ಶೇ. 100ರಷ್ಟು ಯಶಸ್ವಿಯಾಗಬಹುದೇನೋ..

Post a Comment

0 Comments