ಮೂಡುಬಿದಿರೆ : ರಾಷ್ಟ್ರೀಯ ಸ್ವಯಂಸೇವಕ ಸಂಘ ಆರಂಭವಾಗಿ ಇದೀಗ ನೂರು ವರ್ಷಗಳು ಪೂರ್ತಿಯಾಗಿರುವ ಸಂದರ್ಭದಲ್ಲಿ ವಿಶ್ವದಾದ್ಯಂತ ಎಲ್ಲಾ ಕಡೆಗಳಲ್ಲಿ
ಜ. 25ರಂದು " ಹಿಂದು ಸಂಗಮ " ಕಾರ್ಯಕ್ರಮವನ್ನು ಸ್ವರಾಜ್ಯ ಮೈದಾನದಲ್ಲಿ ಹಮ್ಮಿಕೊಂಡಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಕೋಟೆಬಾಗಿಲು ಶ್ರೀ ವೀರ ಮಾರುತಿ ದೇವಸ್ಥಾನದಲ್ಲಿ ಜರುಗಿತು .
ಮೂಡುಬಿದಿರೆ ಜೈನಮಠದ ಶ್ರೀ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ
ಆಮಂತ್ರಣ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ " ಮನೆ ಮನೆಗಳಲ್ಲಿ ಪವಿತ್ರವಾದ ಭಗವಾಧ್ವಜವನ್ನು ಅರಳಿಸಿರಿ. ಪ್ರತಿ ಮನೆಯಿಂದ ಕನಿಷ್ಠ ಎರಡು ಮಂದಿಯಾದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದು ಧರ್ಮದ ಔನ್ನತ್ಯವನ್ನು ಸಾರಬೇಕು ಆ ಮೂಲಕ ನಾವೆಲ್ಲಾ ಹಿಂದು, ನಾವೆಲ್ಲಾ ಒಂದು ಎಂಬ ರಾ.ಸ್ವ.ಸೇ.ಸಂಘದ ಮಾನನೀಯರಾದ ಡಾ . ಹೆಡಗೆವಾರ್ ,
ಗುರೂಜಿಯವರ ಚಿಂತನೆಯನ್ನು ಕಾರ್ಯಗತಗೊಳಿಸಬೇಕು " ಎಂದು ಹಾರೈಸಿದರು .
ರಾ.ಸ್ವ .ಸಂಘದ ಸೋಂದಾ ಭಾಸ್ಕರ್ ಭಟ್ ಅವರು , " 44 ರಷ್ಟು ವಿದೇಶಗಳಲ್ಲೂ ವ್ಯಾಪಿಸಿರುವ ಸಂಘವು ಇಂದು ಶತಮಾನೋತ್ಸವ ಆಚರಿಸುತ್ತಿದ್ದು , ಸಂಘವು ಎಲ್ಲಾ ಹಿಂದುಗಳಲ್ಲಿ ಸಮಾನತೆಯ ತತ್ವ ಬೋಧಿಸುವಲ್ಲಿ ಸಫಲವಾಗಿದೆ ಎಂದರು.
ಮೂಡುಬಿದಿರೆ ಪ್ರಖಂಡದ ವಿಶ್ವ ಹಿಂದು ಪರಿಷತ್ ನ ಕಾರ್ಯಾಧ್ಯಕ್ಷ ಶಾಮ ಹೆಗ್ಡೆ , ಉಪಾಧ್ಯಕ್ಷ ಎಂ.ಶಾಂತರಾಮ ಕುಡ್ವ , ಹಿಂದು ಸಂಗಮ ಮೂಡುಬಿದಿರೆ ನಗರದ ಸಂಚಾಲಕ ನಾಗರಾಜ ಹೆಗ್ಡೆ , ರಾ.ಸ್ವ.ಸಂಘದ ಪ್ರಮುಖ್ ಮಂಜುನಾಥ ಶೆಟ್ಟಿ , ರಾಷ್ಟ್ರೀಯ ಸ್ವಯಂಸೇವಿಕಾ ಸಮಿತಿಯ ಮೂಕಾಂಬಿಕಾ ಭಟ್ ಸಹಿತ ಸಂಘದ ಹಿರಿಯರು ಉಪಸ್ಥಿತರಿದ್ದರು . ರಾ.ಸ್ವ.ಸಂಘದ ಪ್ರಮುಖರಾದ ರೋಹನ್ ಬಂಗೇರಾ ಅವರು ಕಾರ್ಯಕ್ರಮ ನಿರೂಪಿಸಿದರು .


0 Comments