ವೈಬ್ರೆಂಟ್ ಜ್ಞಾನಕಾಶಿ" ಶಾಲಾ ಹೆಸರು ಅನಾವರಣ

ಜಾಹೀರಾತು/Advertisment
ಜಾಹೀರಾತು/Advertisment

 "ವೈಬ್ರೆಂಟ್ ಜ್ಞಾನಕಾಶಿ" ಶಾಲಾ ಹೆಸರು ಅನಾವರಣ                     

ಮೂಡುಬಿದಿರೆ :  ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ವನಜಾಕ್ಷಿ ಎಜ್ಯುಕೇಶನ್ ಫೌಂಡೇಶನ್ ಮತ್ತು   ವೈಬ್ರೆಂಟ್  ಚಾರಿಟೇಬಲ್ ನ ಜಂಟಿ ಸಹಯೋಗದೊಂದಿಗೆ  'ವೈಬ್ರೆಂಟ್ ಜ್ಞಾನಕಾಶಿ" ನ್ಯಾಷನಲ್ ಶಾಲೆಯ ಹೆಸರನ್ನು    ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅನಾವರಣಗೊಳಿಸಿದರು.   


 ನಂತರ ಮಾತನಾಡಿದ ಅವರು ಮೂಡುಬಿದಿರೆ ಜೈನ ಕಾಶಿಯು ಹೌದು, ವಿದ್ಯಾ ಕಾಶಿಯೂ ಹೌದು.  ಪ್ರತಿಯೊಂದು ಮಗುವಿಗೂ ಮೌಲ್ಯಧಾರಿತ ಶಿಕ್ಷಣ ದೊರೆತಾಗ ಮಗು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

 

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವನಜಾಕ್ಷಿ ಎಜುಕೇಶನ್ ಫೌಂಡೇಶನ್ ಸ್ಥಾಪಕರಾದ ಶ್ರೀಪತಿ ಭಟ್ ರವರು  '' ಗ್ರಾಮೀಣ ವಿದ್ಯಾರ್ಥಿಗಳಿಗೂ ಮೌಲ್ಯಧಾರಿತ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ತರಬೇತಿ ದೊರೆತಾಗ ಆ ಮಗು ಜೀವನದಲ್ಲಿ ಯಶಸ್ವಿಯನ್ನು ಕಾಣಲು ಸಾಧ್ಯ'' ಎಂದರು. 


ಕಾಲೇಜಿನ ಟ್ರಸ್ಟಿ ಡಾ. ಶರತ್ ಗೋರೆ '' ಇಂದಿನ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ  ಪೂರಕವಾಗುವಂತಹ ಮತ್ತು  ಜೀವನವನ್ನು ರೂಪಿಸುವ ನೈಜ ಶಿಕ್ಷಣದ ಅವಶ್ಯಕತೆ ಇದೆ .  ವಿದ್ಯಾರ್ಥಿಯು ಪ್ರಾಮಾಣಿಕವಾಗಿ ಈ ಶಿಕ್ಷಣವನ್ನು ಸದುಪಯೋಗಪಡಿಸಿಕೊಂಡಲ್ಲಿ ಸಾಧನೆಯ ಗುರಿ ಮುಟ್ಟಲು ಸಾಧ್ಯ'' ಎಂದು ತಿಳಿಸಿದರು. 


 ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲರಾದ ಡಾ. ಎಸ್. ಎನ್. ವೆಂಕಟೇಶ್ ನಾಯಕ್  ರವರು ನೂತನ ಶಾಲೆಯ ಉದ್ದೇಶ ಮತ್ತು ಧ್ಯೇಯವನ್ನು  ತಿಳಿಸಿದರು.


 ಮೂಡುಬಿದಿರೆಯ ವನಜಾಕ್ಷಿ ಫೌಂಡೇಶನ್  ಫೌಂಡೇಶನ್ ಟ್ರಸ್ಟಿಗಳಾದ  ಬಾಲಕೃಷ್ಣ ಭಟ್,  ದೀಪ್ತಿ ಬಾಲಕೃಷ್ಣ, ಬಲರಾಮ ಭಟ್ ಮೂಡುಬಿದಿರೆ ಕಾಯ೯ನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಬಿ. ಸೀತಾರಾಮ್ ಆಚಾರ್ಯ, ಕಾಲೇಜಿನ ಟ್ರಸ್ಟಿಗಳಾದ  ಚಂದ್ರಶೇಖರ್ ರಾಜೇ ಅರಸ್ ಮೆಹಬೂಬ್ ಬಾಷಾ, ಯೋಗೇಶ್ ಬೆಡೆಕರ್, ಸುಭಾಷ್ ಝಾ ಉಪಸ್ಥಿತರಿದ್ದರು. 


ಕನ್ನಡ ವಿಭಾಗದ ಉಪನ್ಯಾಸಕ ನಿಕೇತ್ ಮೋಹನ್ ದಾಸ್ ಶೆಟ್ಟಿ ಕಾಯ೯ಕ್ರಮ ನಿರೂಪಿಸಿದರು.

Post a Comment

0 Comments