ಪೌಷ್ಟಿಕ ಆಹಾರ ಸಪ್ತಾಹ : ಜಾಗೃತಿ ಕಾಯ೯ಕ್ರಮ

ಜಾಹೀರಾತು/Advertisment
ಜಾಹೀರಾತು/Advertisment

 ಪೌಷ್ಟಿಕ ಆಹಾರ ಸಪ್ತಾಹ : ಜಾಗೃತಿ ಕಾಯ೯ಕ್ರಮ 

ಮೂಡುಬಿದಿರೆ : ಪೌಷ್ಟಿಕ ಆಹಾರ ಸಪ್ತಾಹದ ಅಂಗವಾಗಿ  ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಇವುಗಳ ಸಹಯೋಗದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

 ಡಾ. ಅಕ್ಷತಾ ನಾಯಕ್ ಅವರು ಪೌಷ್ಟಿಕ ಆಹಾರದ ಮಹತ್ವ ಹಾಗೂ ಸಮತೋಲಿತ ಆಹಾರ ಸೇವನೆಯ ಅಗತ್ಯತೆಯ ಬಗ್ಗೆ ಮಾರ್ಗದರ್ಶನ ನೀಡಿದರು.

ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್ ರವರು ಪೌಷ್ಟಿಕ ಆಹಾರ ಸಪ್ತಾಹದ ಕುರಿತು ಮಾತನಾಡಿ, ಸರ್ಕಾರ ಪೂರೈಸುವ ಪೌಷ್ಟಿಕ ಆಹಾರವನ್ನು ಪಡೆಯುವ ಹಕ್ಕುಗಳ ಬಗ್ಗೆ ಮಾಹಿತಿಯನ್ನು ನೀಡಿದರು.

 ಕಾಯ೯ದಶಿ೯ ಅನಿತಾ, ಸದಸ್ಯರಾದ ಸುಚೇತ ಕೋಟ್ಯಾನ್, ಮೀನಾಕ್ಷಿ ನಾರಾಯಣ್, ವೀಣಾ ಜೈನ್, ಸುಜಯ ವೇದ ಕುಮಾರ್, ಸುಷ್ಮಾ ಮತ್ತು ಪೂಣಿ೯ಮ ದಾಮೋದರ್ ಹಾಗೂ ಆರೋಗ್ಯ ಇಲಾಖೆಯ ಸಿಬಂದಿ ವಗ೯ ಈ ಸಂದಭ೯ದಲ್ಲಿದ್ದರು.

Post a Comment

0 Comments