ಮೂಡುಬಿದಿರೆಯ ಸ್ವಚ್ಛತೆಯ ಹೀರೋಗಳಿವರು.. *ಗಣಪತಿ ವಿಸಜ೯ನಾ ಸಂದಭ೯ದಲ್ಲಿ ಬಿದ್ದ ತ್ಯಾಜ್ಯವನ್ನು ರಾತ್ರಿಯೇ ಗುಡಿಸಿದ ಪೌರಕಾಮಿ೯ಕರು


ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯ ಸ್ವಚ್ಛತೆಯ ಹೀರೋಗಳಿವರು..

  *ಗಣಪತಿ ವಿಸಜ೯ನಾ ಸಂದಭ೯ದಲ್ಲಿ ಬಿದ್ದ ತ್ಯಾಜ್ಯವನ್ನು  ರಾತ್ರಿಯೇ ಗುಡಿಸಿದ ಪೌರಕಾಮಿ೯ಕರು

ಮೂಡುಬಿದಿರೆ :  ನಿನ್ನೆ ರಾತ್ರಿ ನಡೆದ ಮೂಡುಬಿದಿರೆ ಗಣಪತಿಯ ವಿಸಜ೯ನಾ ಮೆರವಣಿಗೆಯ ಸಂದಭ೯ದಲ್ಲಿ ಪೇಟೆಯ ರಸ್ತೆಯಲ್ಲಿ ಬಿದ್ದಿರುವ ಕಸ, ತ್ಯಾಜ್ಯಗಳನ್ನು ಪೌರಕಾಮಿ೯ಕರು ರಾತ್ರಿಯೇ ಗುಡಿಸಿ ಸ್ವಚ್ಛಗೊಳಿಸುವ ಮೂಲಕ ಮೂಡುಬಿದಿರೆಯ ನಿಜವಾದ ಹೀರೋಗಳಾಗಿದ್ದಾರೆ. 

 ಮೊಸರು ಕುಡಿಕೆ ಉತ್ಸವ ಮತ್ತು ಗಣೇಶೋತ್ಸವದ ಸಂದಭ೯ದಲ್ಲಿ ರಸ್ತೆಯ ಬದಿಗಳಲ್ಲಿ ವ್ಯಾಪಾರರಸ್ಥರು ತಿಂಡಿ ತಿನಿಸುಗಳ, ಜ್ಯೂಸ್ ಗಳ ಸ್ಟಾಲ್ ಹಾಗೂ ಐಸ್ ಕ್ರೀಂಗಳ ವಾಹನಗಳನ್ನು ಇಡುವುದರಿಂದ ಸಾವ೯ಜನಿಕರು ತಿಂದು ಮುಗಿಸಿದ ತಿಂಡಿ ತಿನಿಸುಗಳ ಪ್ಯಾಕೆಟ್ ಗಳನ್ನು ರಸ್ತೆಯಲ್ಲಿ ಹಾಕುತ್ತಾರೆ. 

ಅಲ್ಲದೆ ಪುರಸಭೆಯವರು ಕಸಗಳನ್ನು ಹಾಕಲೆಂದು ಅಲ್ಲಲ್ಲಿ ಕಟ್ಟಿರುವ ಗೋಣಿಚೀಲಗಳಲ್ಲಿಯೂ ಕಸಗಳು ತುಂಬಿಕೊಂಡು ಕೆಳಗೆ ಚೆಲ್ಲಿರುತ್ತವೆ ಅದು ಮರುದಿನ ಬೆಳಿಗ್ಗೆ ಸಾವ೯ಜನಿಕರು ನೋಡುವಾಗ ಅಸಹ್ಯವಾಗಿ ಕಾಣುತ್ತದೆ. 

ಆದ್ದರಿಂದ ಅದನ್ನು ರಾತ್ರಿಯೇ ವಿಲೇವಾರಿ ಮಾಡಿ ಮೂಡುಬಿದಿರೆ ಪೇಟೆಯನ್ನು ಸ್ವಚ್ಛವಾಗಿ ಕಾಣುವಂತೆ ಮಾಡುವ ನಿಟ್ಟಿನಲ್ಲಿ ಪೌರಕಾಮಿ೯ಕರು  ಶೋಭಾಯಾತ್ರೆ ಸಾಗಿದ ನಂತರ ರಾತ್ರಿ ಎರಡು ಗಂಟೆವರೆಗೆ ಸ್ವಚ್ಛತಾ ಕಾಯ೯ದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೋಮವಾರ ಬೆಳಿಗ್ಗೆ ಸ್ವಚ್ಛ ಮೂಡುಬಿದಿರೆಯಾಗಿ ಕಾಣುವಂತೆ ಮಾಡಿ ಗಮನ ಸೆಳೆದಿದ್ದಾರೆ. 


ಅಲ್ಲದೆ ಪುರಸಭೆಯ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ ಮತ್ತು ಮುಖ್ಯಾಧಿಕಾರಿ ಇಂದು ಎಂ. ಅವರು ಸ್ವಚ್ಛತೆಗೆ ಆದ್ಯತೆ ನೀಡುವಂತೆ ವ್ಯಾಪಾರಸ್ಥರಲ್ಲಿ ಮತ್ತು ಸಾವ೯ಜನಿಕರಲ್ಲಿ ಮನವಿ ಕೂಡಾ ಮಾಡಿದ್ದರು ಇದು ಕೂಡಾ ಪೌರಕಾಮಿ೯ಕರಿಗೆ ಸ್ವಲ್ಪ ಮಟ್ಟಿಗೆ ಉಪಯೋಗವಾಗಿದೆ.

Post a Comment

0 Comments