ಅಪಘಾತ : 10 ವಷ೯ಗಳ ಬಳಿಕ ಆರೋಪಿಗೆ ಶಿಕ್ಷೆ ಪ್ರಕಟಿಸಿದ ಕೋಟ್೯

ಜಾಹೀರಾತು/Advertisment
ಜಾಹೀರಾತು/Advertisment

 ಅಪಘಾತ : 10 ವಷ೯ಗಳ ಬಳಿಕ ಆರೋಪಿಗೆ ಶಿಕ್ಷೆ ಪ್ರಕಟಿಸಿದ ಕೋಟ್೯

ಮೂಡುಬಿದಿರೆ : 10  ವಷ೯ಗಳ ಹಿಂದೆ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಸವಾರನ ಸಾವಿಗೆ ಕಾರಣವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸ್ ಚಾಲಕನ ವಿರುದ್ಧ ಸಿ. ಜೆ. ಮತ್ತು ಜೆ. ಎಂ. ಎಫ್.ಸಿ.ನ್ಯಾಯಾಲಯವು ದಂಡ ಸಹಿತ ಶಿಕ್ಷೆ ಪ್ರಕಟಿಸಿದೆ.


 2015ರ ಡಿಸೆಂಬರ್ 30ರಂದು 

 ನಿಡ್ಡೋಡಿ ಗ್ರಾಮದ ಕಲ್ಲಕುಮೇರು ಎಂಬಲ್ಲಿಯ ತಿರುವಿನ ಬಳಿ ಡಾಮಾರು ರಸ್ತೆಯಲ್ಲಿ ನಿಡ್ಡೋಡಿ ಕಡೆಯಿಂದ ಕಟೀಲು ಕಡೆಗೆ ಆರೋಪಿ ಬಸ್ ಚಾಲಕ ಶ್ರೀನಿವಾಸ ಆರ್.ಎಂ ಎಂಬಾತ ಬಸ್ಸನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಕಟೀಲು ಕಡೆಯಿಂದ ನಿಡ್ಡೋಡಿ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮುರಳೀಧರ ಬೆಳೆರಾಯ ಎಂಬವರು ಗಂಭೀರವಾಗಿ ಗಾಯಗೊಂಡು, ಬಳಿಕ ಚಿಕಿತ್ಸೆ‌ ಫಲಕಾರಿಯಾಗದೆ‌ ಮೃತಪಟ್ಟಿದ್ದರು. ಸಹ ಸವಾರ ಲಕ್ಷ್ಮಿ ನಾರಾಯಣ ಎಂಬವರು  ಗಂಭೀರವಾಗಿ ಗಾಯಗೊಂಡಿದ್ದರು. 

ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿ ಸರ್ಕಾರಿ‌ ಅಭಿಯೋಜಕಿ‌ ಶೋಭಾ ಎಸ್. ವಾದ ಮಂಡಿಸಿದ್ದರು. ಮೂಡುಬಿದಿರೆ ಠಾಣೆಯ ಅಂದಿನ ಪೊಲೀಸ್ ನಿರೀಕ್ಷಕ  ಅನಂತ ಪದ್ಮನಾಭ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಕಾವೇರಮ್ಮ ಅವರು "ಭಾ.ದಂ.ಸಂ.ಯ ಕಲಂ 279ರಡಿಯಲ್ಲಿ ಆರು ತಿಂಗಳ ಸಾದಾ ಕಾರಾಗ್ರಹ ವಾಸ ಮತ್ತು ರೂ 500/-ಗಳ ಜುಲ್ಮಾನೆಯನ್ನು ಪಾವತಿಸತಕ್ಕದ್ದು. ದಂಡ ಪಾವತಿಸಲು ಆರೋಪಿಯು ತಪ್ಪಿದಲ್ಲಿ 7(ಏಳು) ದಿನಗಳ ಸಾದಾ ಕಾರವಾಸದ ಸಜೆಯನ್ನು ಅನುಭವಿಸತಕ್ಕದ್ದು. ಭಾ.ದಂ.ಸಂ.ಯ ಕಲಂ 338ರಡಿಯಲ್ಲಿ 2 ವರ್ಷ ಸಾದಾ ಕಾರಾವಾಸ ಮತ್ತು ರೂ 500/-ಗಳ ಜುಲ್ಮಾನೆಯನ್ನು ಪಾವತಿಸತಕ್ಕದ್ದು. ದಂಡ ಪಾವತಿಸಲು ಆರೋಪಿಯು ತಪ್ಪಿದಲ್ಲಿ 7(ಏಳು) ದಿನಗಳ ಸಾದಾ ಕಾರವಾಸದ ಸಜೆಯನ್ನು ಅನುಭವಿಸತಕ್ಕದ್ದು. ಭಾರತೀಯ ದಂಡ ಸಂಹಿತೆ ಕಲಂ:304(ಎ)ರಡಿಯಲ್ಲಿ ಎರಡು ವರ್ಷಗಳ ಸಾದಾ ಕಾರವಾಸ ಮತ್ತು ರೂ 5,000/-ಗಳ ದಂಡವನ್ನು ಪಾವತಿ ಮಾಡತಕ್ಕದ್ದು, ದಂಡ ಪಾವತಿಸಲು ಆರೋಪಿ ತಪ್ಪಿದ್ದಲ್ಲಿ 30 ದಿನಗಳ ಸಾದಾ ಕಾರಗ್ರಾಹ ವಾಸದ ಸಜೆಯನ್ನು ಅನುಭವಿಸತಕ್ಕದ್ದು ಎಂದು ಸೆ. 3 ರಂದು ತೀರ್ಪನ್ನು ನೀಡಿ ಆದೇಶವನ್ನು ಏಕಕಾಲದಲ್ಲಿ ಪ್ರಕಟಿಸಿದ್ದಾರೆ.

Post a Comment

0 Comments