ಮೂಡುಬಿದಿರೆ ಪುರಸಭಾ ಸಾಮಾನ್ಯ ಸಭೆ
ವಸತಿ ಸಮುಚ್ಛಗಳ ಕೊಳಚೆ ನೀರು ರಾಜಕಾಲುವೆಗಳಿಗೆ ಬಿಡುತ್ತಿರುವ ಬಗ್ಗೆ ಸದಸ್ಯರ ಆಕ್ಷೇಪ
ಮೂಡುಬಿದಿರೆ : ಇಲ್ಲಿನ ಪುರಸಭೆಯ ಸಾಮಾನ್ಯ ಸಭೆಯು ಅಧ್ಯಕ್ಷೆ ಜಯಶ್ರೀ ಕೇಶವ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಪುರಸಭಾ ಸಭಾಭವನದಲ್ಲಿ ನಡೆಯಿತು.
ಪೇಟೆಯಲ್ಲಿರುವ ಹಲವಾರು ವಸತಿ ಸಮುಚ್ಚಯಗಳಿಂದ ಲೀಚ್ ಪಿಟ್ ಮೂಲಕ ಕೊಳಚೆ ನೀರನ್ನು ತೋಡಿಗೆ ಬಿಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ ಸದಸ್ಯ ಪ್ರಸಾದ್ ಕುಮಾರ್ ಅವರು ವಿಶ್ವಾಸ್ ಪ್ಯಾರಡೈಸ್ ಕಟ್ಟಡದ ಲೀಚ್ ಪಿಟ್ ತೆರೆದು ಪೊನ್ನೆಚಾರಿ ರಾಜಕಾಲುವೆಗೆ ಬಿಡಲಾಗುತ್ತದೆ. ಈ ವಿಚಾರವನ್ನು ಪುರಸಭಾ ಅಧಿಕಾರಿಗೆ ಸಂದರ್ಭ ಸಹಿತವಾಗಿ ತಿಳಿಸಿರುವುದನ್ನು ಗಮನ ಸೆಳೆದರು. ರಾಯಲ್ ಪ್ಯಾರಡೈಸ್ ಬಿಲ್ಡಿಂಗ್ ಲೀಚ್ ಪಿಟ್ ಅವ್ಯವಸ್ಥೆ ಬಗ್ಗೆ ತಾನು ಪ್ರಶ್ನಿಸಿರುವುದನ್ನು ಈ ಕಚೇರಿಯಿಂದಲೇ ಸಂಬಂಧಿತರಿಗೆ ತಿಳಿಸಲಾಗಿದೆ ಎಂದುಸದಸ್ಯ ಕೊರಗಪ್ಪ ದೂರಿದರು.
ಮರೀನಾ ಅಪಾರ್ಟ್ಮೆಂಟ್, ಆರ್ ಬಿ ಬಿಲ್ಡಿಂಗ್ ಕೊಳಚೆ ರಾಜರಸ್ತೆ ಮೂಲಕ ಕಾಲುವೆಗೆ ಬರುವ ಬಗ್ಗೆ ಕರೀಂ ಪ್ರಸ್ತಾಪಿಸಿ ಕ್ರಮ ಕೈಗೊಳ್ಳುವಂತೆ ಕೋರಿದರು.
ಮಂಗಳೂರು ಜಿಲ್ಲಾಧಿಕಾರಿ ಅಧಿಕಾರ ಪಡೆದು ತಿಂಗಳು ಎರಡಾದರೂ ಪುರಸಭೆ ಕೆಲಸದ ಟೆಂಡರ್ ಅಪ್ರೂವಲ್ ಸಿಕ್ಕಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸಗಳೇ ಆಗುತ್ತಿಲ್ಲ ಎಂದು ಉಪಾಧ್ಯಕ್ಷ ನಾಗರಾಜ್ ಪೂಜಾರಿ ಸಭೆಯ ಗಮನಕ್ಕೆ ತಂದಾಗ ಮುಖ್ಯಾಧಿಕಾರಿ ಇಂದು ಎಂ. ಅವರು ಎರಡು ದಿನಗಳ ಕಾಲ ಕಾದು ನೋಡೋಣ ಅಫ್ರೂವಲ್ ಸಿಗಬಹುದು ಇಲ್ಲದಿದ್ದರೆ ಮತ್ತೆ ಭೇಟಿಯಾಗಿ ಮಾತನಾಡೋಣ ಎಂದು ಸಮಧಾನ ಪಡಿಸಿದರು.
ಬೆಟ್ಕೇರಿ ಹಿಂದೂ ಸ್ಮಶಾನ ಅಭಿವೃದಿ ಬಗ್ಗೆ ಸದಸ್ಯ ಪುರಂದರ ದೇವಾಡಿಗ ಪ್ರಸ್ತಾಪಿಸಿದರು. ವಾಣಿಜ್ಯ ನೀರಿನ ಬಿಲ್ಲು ಬಾಕಿ ಇಟ್ಟು ಮನೆಯ ಬಡವರ ಬಿಲ್ಲುಗಳನ್ನು ವಸೂಲಿ ಮಾಡಲಾಗುತ್ತದೆ. ವಾಣಿಜ್ಯ ನೀರು ಬಳಕೆದಾರರ ಬಿಲ್ಲನ್ನು ಕೂಡ ವಸೂಲಿ ಮಾಡಬೇಕೆಂದು ಸದಸ್ಯರು ಆಗ್ರಹಿಸಿದರು.
ಎಸ್ ಸಿ, ಎಸ್.ಟಿ ಮನೆಗಳ ಕುಡಿಯುವ ನೀರಿನ ಬಿಲ್ ಐವತ್ತು ಸಾವಿರಕ್ಕೂ ಹೆಚ್ಚಾಗಿದ್ದು ಅದಾಲತ್ ಮೂಲಕ ಪರಿಹರಿಸುವಂತೆ ಸುರೇಶ್ ಪ್ರಭು ಕೋರಿದರು.
ಪುರಸಭಾ ವ್ಯಾಪ್ತಿಯ ರಸ್ತೆಗಳ ಅವಸ್ಥೆ ಬಗ್ಗೆ ಸದಸ್ಯರು ಸದನದ ಗಮನ ಸೆಳೆದರು. ಈ ಬಗ್ಗೆ ಶಾಸಕರೊಂದಿಗೆ ಸದಸ್ಯರು ಪಿಡಬ್ಲ್ಯೂಡಿ ಕಚೇರಿ ತೆರಳಿ ಅಧಿಕಾರಿಗಳನ್ನು ಭೇಟಿ ಆಗುವ ಬಗ್ಗೆ ಪಿಕೆ ಥಾಮಸ್ ಸಲಹೆಯಿತ್ತರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ವಾತಿ ಪ್ರಭು, ಇಂಜಿನಿಯರ್ ನಳಿನ್ ಕುಮಾರ್, ದಿವಾಕರ್, ಸದಸ್ಯರು ಚಚೆ೯ಯಲ್ಲಿ ಪಾಲ್ಗೊಂಡಿದ್ದರು.
0 Comments