ನಿಧನ: ಹಿರಿಯ ವೈದ್ಯ ಡಾ.ಎಂ.ರಾಮ ಭಟ್ ಮೂಡುಬಿದಿರೆ

ಜಾಹೀರಾತು/Advertisment
ಜಾಹೀರಾತು/Advertisment

 ನಿಧನ: ಹಿರಿಯ ವೈದ್ಯ ಡಾ.ಎಂ.ರಾಮ ಭಟ್ ಮೂಡುಬಿದಿರೆ

ಮೂಡುಬಿದಿರೆ: ಹಿರಿಯ ಆಯರ್ವೇದ , ಅಲೋಪತಿ ವೈದ್ಯ ಡಾ. ಎಂ. ರಾಮ ಭಟ್ ( 92) ಅಲ್ಪಕಾಲದ ಅಸ್ವಾಸ್ಥ್ಯದ ಬಳಿಕ ಅರಮನೆ ರಸ್ತೆಯ ತಮ್ಮ ಮಹಾಲಸಾ ನಿವಾಸದಲ್ಲಿ ಅ17 ರಂದು ನಿಧನ ಹೊಂದಿದರು. ಅವರು ಸಹೋದರ, ಸಹೋದರಿಯರು, ಪುತ್ರ ಹೋಮಿಯೋ ಪತಿ ವೈದ್ಯ ಡಾ. ಗಂಗಾಧರ ಭಟ್ , ಇಬ್ಬರು ಪುತ್ರಿಯರು, ಸೊಸೆ ಡಾ. ವಿನಯಾ ಜಿ. ಭಟ್ ಸಹಿತ ಬಂಧುವರ್ಗವನ್ನು ಅಗಲಿದ್ದಾರೆ.

1956ರಲ್ಲಿ ಎಲ್.ಎ. ಎಂ. ಎಸ್ ಪದವೀಧರ ವೈದ್ಯರಾಗಿ ಬೆರಳೆಣಿಕೆಯ ವೈದ್ಯರಿದ್ದ ಕಾಲದಲ್ಲಿ 1958 ರಿಂದ ಕ್ಲೀನಿಕ್ ತೆರೆದು ವೈದ್ಯಕೀಯ ಸೇವೆ ಆರಂಭಿಸಿದ್ದ ಅವರು

ಐದೂವರೆ ದಶಕಗಳ ಕಾಲ ಪೇಟೆ ಹಾಗೂ ಗ್ರಾಮಾಂತರ ಪ್ರದೇಶಕ್ಕೂ ತೆರಳಿ ವೈದ್ಯಕೀಯ ಸೇವೆ ಸಲ್ಲಿಸಿದ್ದರು.

ತಂದೆ ನರಸಿಂಹ ಭಟ್ ಅವರ ಆಯುರ್ವೇದ ಪಂಡಿತ ಪರಂಪರೆಯ ಸಮರ್ಥ ಉತ್ತರಾಧಿಕಾರಿಯಾಗಿ ಚಿನ್ನೆ,ವಾಯು ಮಾತ್ರೆ . ಕಷಾಯ, ತೈಲ, ಚೂರ್ಣ ಸಹಿತ ಮಂತ್ರ ದಾರಗಳಿಗೆ ಅವರು ಹೆಸರಾಗಿದ್ದರು.

ಮೂಡುಬಿದಿರೆಯ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಮಾಜಿ ಮೊಕ್ತೇಸರರಾಗಿಯೂ ಅವರು ಅವಧಿಗೆ ಸೇವೆ ಸಲ್ಲಿಸಿದ್ದರು. ಪ್ರಧಾನ ಅರ್ಚಕರಿಗೆ ಸೂತಕದ ಅವಧಿಯಲ್ಲಿ ದೇವಳದ ಪ್ರಧಾನ ಅರ್ಚಕರಾಗಿಯೂ ಸೇವೆ ಸಲ್ಲಿಸಿದ್ದರು.

ಶ್ರೀ ವೆಂಕಟರಮಣ ದೇವಸ್ಥಾನದ ನವೀಕರಣ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿದ್ದರು.

ಮೂಡುಬಿದಿರೆಯಲ್ಲಿ ವೈದ್ಯರ ಸಂಘ, ಬಾಬು ರಾಜೇಂದ್ರ ಪ್ರಸಾದ್ ಪ್ರೌಢ ಶಾಲೆ, ಲಯನ್ಸ್ ಸ್ಥಾಪಕ ಸದಸ್ಯರಾಗಿದ್ದರು.

ಬಾಲ್ಯದಿಂದಲೂ ಆರೆಸ್ಸೆಸ್ ಕಾರ್ಯಕರ್ತರಾಗಿ , ಭಾರತೀಯ ಜನ ಸಂಘದ ಸದಸ್ಯರಾಗಿ ತುರ್ತು ಪರಿಸ್ಥಿತಿಯ ವೇಳೆ ಜನ ಸಂಘದ ಅಧ್ಯಕ್ಷರಾಗಿದ್ದರು. ಧಾರ್ಮಿಕವಾಗಿ ಸಕ್ರಿಯರಾಗಿದ್ದ ಅವರು ಹರಿ ಗುರು ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು.

Post a Comment

0 Comments