ಬೆಳುವಾಯಿಯಲ್ಲಿ " ಆಯುಷ್ಮಾನ್ ಆರೋಗ್ಯ ಕೇಂದ್ರ"ಕ್ಕೆ ಶಿಲಾನ್ಯಾಸ
ಮೂಡುಬಿದಿರೆ : ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುಡೇಲ್ ನಲ್ಲಿ ರೂ 65 ಲಕ್ಷದಲ್ಲಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ “ಆಯುಷ್ಮಾನ್ ಅರೋಗ್ಯ ಕೇಂದ್ರ” ನಿರ್ಮಾಣ ಕಾಮಗಾರಿಗೆ ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ಶುಕ್ರವಾರ ಶಿಲಾನ್ಯಾಸಗೈದರು.
ಗ್ರಾ. ಪಂ. ನ ಮಾಜಿ ಅಧ್ಯಕ್ಷರುಗಳಾದ ಸೋಮನಾಥ್ ಕೋಟ್ಯಾನ್, ಸುಶೀಲ, ಪಂಚಾಯತ್ ಸದಸ್ಯರಾದ ಭರತ್ ಶೆಟ್ಟಿ ಹಾಗೂ ಪಕ್ಷದ ಪ್ರಮುಖರಾದ ಆನಂದ ಶಾಂತಿನಗರ,ರೋಶನ್ ಶೆಟ್ಟಿ, ಸುದೇಶ್ ಬೆಳುವಾಯಿ, ಯೋಗಿಶ್ ನಾಯ್ಕ್, ಬೆಳುವಾಯಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಈ ಸಂದಭ೯ದಲ್ಲಿದ್ದರು.
0 Comments