ಅನಾಥ ವ್ಯಕ್ತಿಯ ಶವ ಸಂಸ್ಕಾರ ಮಾಡಿದ ಇರುವೈಲ್ ಫ್ರೆಂಡ್ಸ್ ಕ್ಲಬ್
ಮೂಡುಬಿದಿರೆ : ಅನಾರೋಗ್ಯದಿಂದ ಸಾವನ್ನಪ್ಪಿದ ಅನಾಥ ವ್ಯಕ್ತಿಯೋವ೯ರ ಶವವನ್ನು ಇರುವೈಲ್ ಫ್ರೆಂಡ್ಸ್ ಕ್ಲಬ್ ನವರು ಮಂಗಳವಾರ ಅಂತ್ಯ ಸಂಸ್ಕಾರ ಮಾಡುವ ಮೂಲಕ ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಸೇವೆಗೆ ಮಾದರಿಯಾಗಿದ್ದಾರೆ.
ಇರುವೈಲು ಹೊಸಮಾರಪದವು ನಿವಾಸಿ ಸಂಜೀವ ಅವರು ಮೃತಪಟ್ಟ ವ್ಯಕ್ತಿ. ಇವರಿಗೆ ಹೆಂಡ್ತಿ ಮಕ್ಕಳು, ಸಂಸಾರ ಯಾರೂ ಇಲ್ಲ. ತಾಯಿ ಮಗ ಮಾತ್ರ ಇದ್ದವರು.
ತಾಯಿ ಕಳೆದ ವಷ೯ ವಯೋಸಹಜವಾಗಿ ತೀರಿಕೊಂಡಿದ್ದರು.ತಾಯಿಯನ್ನು ಕಳೆದುಕೊಂಡ ನಂತರ ಸಂಜೀವ
ಅವರು ಒಬ್ಬಂಟಿಯಾಗಿದ್ದರು. ಯಾರೂ ಇಲ್ಲದೆ ಅಸಹಾಯಕತೆ ಪರಿಸ್ಥಿತಿಯಲ್ಲಿದ್ದ ಅವರನ್ನು ಇರುವೈಲ್ ಫ್ರೆಂಡ್ಸ್ ಕ್ಲಬ್ ನವರು ಅಶ್ರಮಕ್ಕೆ ಸೇರಿಸಿದ್ದರು.ಕೆಲಕಾಲ ಆಶ್ರಮದಲ್ಲಿದ್ದ ಸಂಜೀವ ಅವರು ಸೋಮವಾರ ಆಶ್ರಮದಲ್ಲೇ ತೀರಿಕೊಂಡರು. ಅಂತ್ಯಕ್ರಿಯೆ ನೆರವೇರಿಸಲು ಯಾರೂ ಇಲ್ಲದಾದಾಗ ಫ್ರೆಂಡ್ಸ್ ಕ್ಲಬ್ ನವರೇ ಶವವನ್ನು ಇರುವೈಲಿಗೆ ತಂದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಅವರ ನೇತ್ರವನ್ನು ದಾನ ಮಾಡಿಸುವ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದಾರೆ. ಸಂಜೀವ ಅವರ ತಾಯಿ ತೀರಿಕೊಂಡಾಗಲೂ ಅವರ ಅಂತ್ಯಕ್ರಿಯೆ ನೆರವೇರಿಸಿದ್ದು ಕೂಡ ಇದೇ ಫ್ರೆಂಡ್ಸ್ ಕ್ಲಬ್ ನವರು.
ಅಂತ್ಯಕ್ರಿಯೆ ನೆರವೇರಿಸುವ ವೇಳೆ ಫ್ರೆಂಡ್ಸ್ ಕ್ಲಬ್ ನ ಪ್ರವೀಣ್ ಪೂಜಾರಿ, ಭರತ್ ಶೆಟ್ಟಿ, ರಾಜೇಶ್ ಪೂಜಾರಿ ಕಾಳೂರು,ಪ್ರದೀಪ್ ಶೆಟ್ಟಿ, ದಿನೇಶ್ ಪ್ರಭು,ದಯಾನಂದ ಪೂಜಾರಿ, ನಿತಿನ್ ಮತ್ತಿತರರು ಉಪಸ್ಥಿತರಿದ್ದರು.
0 Comments