ಕಲ್ಲಬೆಟ್ಟು ಹಿಂದು ಯುವಕ ಮಂಡಲದಿಂದ ಮೊಸರು ಕುಡಿಕೆ ಉತ್ಸವ, ಮುದ್ದುಕೃಷ್ಣ ಸ್ಪಧೆ೯

ಜಾಹೀರಾತು/Advertisment
ಜಾಹೀರಾತು/Advertisment

 ಕಲ್ಲಬೆಟ್ಟು ಹಿಂದು ಯುವಕ ಮಂಡಲದಿಂದ ಮೊಸರು ಕುಡಿಕೆ ಉತ್ಸವ, ಮುದ್ದುಕೃಷ್ಣ ಸ್ಪಧೆ೯ 

ಮೂಡುಬಿದಿರೆ : ಹಿಂದು ಯುವಕ ಮಂಡಲ ಗೋವುಗುಡ್ಡೆ-ಕಲ್ಲಬೆಟ್ಟು ಇದರ 20ನೇ ವಷ೯ದ ಮೊಸರು ಕುಡಿಕೆ ಉತ್ಸವದಂಗವಾಗಿ ಶಾಲಾ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪಧೆ೯ಗಳು ಮತ್ತು ಮುದ್ದುಕೃಷ್ಣ ಸ್ಪರ್ಧೆಯು ಗೋವುಗುಡ್ಡೆ ಶ್ರೀ ಸತ್ಯನಾರಾಯಣ ಕಟ್ಟೆ ವಠಾರದಲ್ಲಿ ರವಿವಾರ ನಡೆಯಿತು.

  ಕಳೆದ ವಷ೯ದ ಮುದ್ದುಕೃಷ್ಣ ಸ್ಪಧೆ೯ಯ ವಿಜೇತ ಮಗು ರಿದ್ವಿಕ್ ಮಾರೂರು ಸಭಾ ಕಾಯ೯ಕ್ರಮವನ್ನು ಉದ್ಘಾಟಿಸಿದರು.

  ಹಿಂದು ಯುವಕ ಮಂಡಲದ ಅಧ್ಯಕ್ಷ ಸುಧೀರ್ ಪೈ ಅವರು ಅಧ್ಯಕ್ಷತೆ ವಹಿಸಿದ್ದರು. 

  ಕಲ್ಲಬೆಟ್ಟು-ಕರಿಂಜೆ-ಮಾರೂರುಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ಶೆಟ್ಟಿ ತೆಂಕಬೆಟ್ಟು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

   ಮಂಗಳೂರು ಎಪಿಎಂಸಿಯ ಮಾಜಿ ಅಧ್ಯಕ್ಷ ಕೆ. ಕೃಷ್ಣ ರಾಜ್ ಹೆಗ್ಡೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ  ಸ್ಪಧಾ೯ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. 

 ಗೌರವಾಧ್ಯಕ್ಷ ಗೋಪಾಲ ಪೂಜಾರಿ, ಕಾಯ೯ದಶಿ೯ ಸತೀಶ್ ಪೂಜಾರಿ ಮತ್ತು ಸದಸ್ಯರು ಈ ಸಂದಭ೯ದಲ್ಲಿದ್ದರು. 

 ಶಿಕ್ಷಕ ಜಿ. ಕೆ. ಬಂಗಾಲಪದವು ಕಾಯ೯ಕ್ರಮ ನಿರೂಪಿಸಿದರು.

25 ಮಕ್ಕಳು ಮುದ್ದುಕೃಷ್ಣ ಸ್ಪಧೆ೯ಯಲ್ಲಿ ಭಾಗವಹಿಸಿದ್ದರು.

Post a Comment

0 Comments