ಧಮ೯ಸ್ಥಳ ಕ್ಷೇತ್ರದ ಬಗ್ಗೆ ಅವಹೇಳನ ವಿರೋಧಿಸಿ ಆ.19ರಂದು ಶ್ರಾವಕರ ನಡೆ, ಧರ್ಮರಕ್ಷಣೆ ಕಡೆ

ಜಾಹೀರಾತು/Advertisment
ಜಾಹೀರಾತು/Advertisment

 ಧಮ೯ಸ್ಥಳ ಕ್ಷೇತ್ರದ ಬಗ್ಗೆ ಅವಹೇಳನ ವಿರೋಧಿಸಿ ಆ.19ರಂದು ಶ್ರಾವಕರ ನಡೆ, ಧರ್ಮರಕ್ಷಣೆ ಕಡೆ

ಮೂಡುಬಿದಿರೆ : ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಜೈನ ಸಮುದಾಯದವರ ಅವಹೇಳ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜೈನಧರ್ಮ ಹಿತರಕ್ಷಣಾ ಸಮಿತಿ ಜೈನಕಾಶಿ ಆಶ್ರಯದಲ್ಲಿ ಆ.19ರಂದು ಬೆಳಗ್ಗೆ 10 ಗಂಟೆಗೆ ಮೂಡುಬಿದಿರೆ ಸಾವಿರ ಕಂಬದ ಬಸದಿಯಿಂದ ಆಡಳಿತ ಸೌಧದವರೆಗೆ ಹಕ್ಕೊತ್ತಾಯ ಮೌನ ಮೆರವಣಿಗೆ ನಡೆಯಲಿದೆ. 

ನಾಡಿನ ಪುರಾತನ ಪವಿತ್ರ ಧಾರ್ಮಿಕ ಶ್ರದ್ಧಾ ಕೇಂದ್ರ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಹಾಗೂ ಜೈನ ಸಮುದಾಯದ ವಿರುದ್ಧ ಅವಹೇಳನಕಾರಿ  ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಜೈನ ಧರ್ಮದ ನಂಬಿಕೆ ಮತ್ತು ಶ್ರದ್ದೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಜೈನ ಸಮುದಾಯವನ್ನು ಮತ್ತು ಜೈನ ನಂಬಿಕೆಗಳು ಹಾಗೂ ಮುನಿಗಳನ್ನು ಮತ್ತು ಶ್ರೇಷ್ಠ ಪರಂಪರೆಯನ್ನು ಹಾಗೂ ಮಠ ಮಂದಿರಗಳನ್ನು ಅಪಹಾಸ್ಯ ಮಾಡಿ ನಿಂದಿಸುವ ತುಚ್ಛ ಕೆಲಸವನ್ನು ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಮಾಡುತ್ತಿದ್ದಾರೆ. ಧರ್ಮಾಧಿಕಾರಿಯಾಗಿ ವೀರೇಂದ್ರ ಹೆಗಡೆಯವರು ನಿಯಮ ಬದ್ಧವಾಗಿ ನಡೆಸುವ ಧಾರ್ಮಿಕ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟು ಮಾಡಿ ಲಕ್ಷಾಂತರ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ವ್ಯಕ್ತಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್ಗಳ ಮೇಲೆ ಕಾನೂನು ಕ್ರಮ ಕೈಗೊಂಡು ಅಲ್ಪಸಂಖ್ಯಾತ ಜೈನ ಸಮುದಾಯಕ್ಕೆ ರಕ್ಷಣೆ ನೀಡಲು ಸರ್ಕಾರವನ್ನು ಒತ್ತಾಯಿಸಲು ಮೌನ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೋರಾಟದ ಪ್ರಮುಖರಾದ ಕುಲದೀಪ ಎಂ. ಚೌಟರ ಅರಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments