ಎಸ್ ಎನ್ ಮೂಡಬಿದ್ರೆ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ ಘಟಕ : ರಜತ ಮಹೋತ್ಸವ ಆಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಎಸ್ ಎನ್ ಮೂಡಬಿದ್ರೆ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ ಘಟಕ  : ರಜತ ಮಹೋತ್ಸವ ಆಚರಣೆ

ಮೂಡುಬಿದಿರೆ: ಸೇವೆಯ ಮೌಲ್ಯವನ್ನು ಅಭ್ಯಾಸ ಮಾಡಿದಾಗ ಉತ್ತಮ ಮನುಷ್ಯರಾಗಿ, ನಾಯಕರಾಗಿ ಬೆಳೆಯಲು ಸಾಧ್ಯ ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ. ಗುರುಪ್ರಸಾದ್ ಎಂ ಹೂಗಾರ್ ಹೇಳಿದರು.

ಅವರು ಎಸ್ ಎನ್ ಮೂಡುಬಿದಿರೆ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ರಜತ ಮಹೋತ್ಸವ ಹಾಗೂ 2025- 26 ನೇ ಸಾಲಿನ ಎನ್ಎಸ್ಎಸ್ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿದರು.ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ ಅಭಯ ಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಉಪಾಧ್ಯಕ್ಷ ಎಸ್ ಡಿ ಸಂಪತ್ ಸಾಮ್ರಾಜ್ಯ, ಮಹಾವೀರ ಕಾಲೇಜು ಪ್ರಾಂಶುಪಾಲ ಡಾ. ರಾಧಾಕೃಷ್ಣ, ಪಾಲಿಟೆಕ್ನಿಕ್ ನ ನಿಕಟಪೂರ್ವ ಪ್ರಾಂಶುಪಾಲ ಜೆ.ಜೆ ಪಿಂಟೋ , ಪ್ರಾಂಶುಪಾಲೆ ನೊರೋನ್ಹಾ ತರೀನಾ ರೀಟ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ರಜತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ  ಲಾಂಛನ ಬಿಡುಗಡೆ, ನೂತನ ಘಟಕ ನಾಯಕರುಗಳಿಗೆ ಬ್ಯಾಡ್ಜ್ ವಿತರಣೆ,  ಪ್ರಮಾಣವಚನ ಬೋಧನೆ, 2001 ರಿಂದ ಇಲ್ಲಿಯ ತನಕ ಕಾರ್ಯಕ್ರಮ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಉಪನ್ಯಾಸಕರಿಗೆ ಗೌರಾರ್ಪಣೆ ನಡೆಸಲಾಯಿತು.ಜೆ ಜೆ ಪಿಂಟೋ ಹಾಗೂ ಡಾ.ಗುರುಪ್ರಸಾದ್ ಹೂಗಾರ್ ಇವರನ್ನು ಸನ್ಮಾನಿಸಲಾಯಿತು. 

ಸಹ ಸಂಸ್ಥೆಯ ಪ್ರಾಂಶುಪಾಲರು, ಕಾಲೇಜಿನ ಸಿಬ್ಬಂದಿ ವರ್ಗ, 275 ಎನ್ಎಸ್ಎಸ್ ಸ್ವಯಂಸೇವಕರು, ಹಿರಿಯ ವಿದ್ಯಾರ್ಥಿಗಳ ತಂಡವಾದ ಎನ್ಎಸ್ಎಸ್ ಸಮ್ಮಿಲನದ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ರಾಮ್ ಪ್ರಸಾದ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ,  ಗೋಪಾಲಕೃಷ್ಣ ಕೆ ಎಸ್ ವಂದಿಸಿದರು. ಎನ್ ಎಸ್ ಎಸ್ ಸ್ವಯಂಸೇವಕರಾದ ಕು.ಚಿತ್ರಶ್ರೀ  ನಿರೂಪಿಸಿದರು.

Post a Comment

0 Comments