ಗೆಳೆಯನ ನಿಲ೯ಕ್ಷ್ಯತನದ ಬೈಕ್ ಚಾಲನೆಯಿಂದಾಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾಥಿ೯ನಿ ಮೃತ್ಯು

ಜಾಹೀರಾತು/Advertisment
ಜಾಹೀರಾತು/Advertisment

 ಗೆಳೆಯನ ನಿಲ೯ಕ್ಷ್ಯತನದ ಬೈಕ್ ಚಾಲನೆಯಿಂದಾಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾಥಿ೯ನಿ ಮೃತ್ಯು

ಮೂಡುಬಿದಿರೆ: ಗೆಳೆಯನ ನಿಲ೯ಕ್ಷ್ಯತನದ ಬೈಕ್ ಚಾಲನೆಯಿಂದಾಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾಥಿ೯ನಿಯೋವ೯ಳು ಪ್ರಾಣವನ್ನು ಕಳೆದುಕೊಂಡ ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಳೆದ ಗುರುವಾರ ಅಲಂಗಾರು ಬಳಿ ಬೈಕೊಂದು ಕೆಎಸ್ ಆರ್ ಟಿಸಿ ಬಸ್ ಗೆ  ಹೊಡೆದಿದ್ದು ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ಬೆಳುವಾಯಿ ನಡಿಗುಡ್ಡೆ ಕೊರಗಪ್ಪ ಅವರ ಪುತ್ರಿ  ಮೈಟ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ನಿಕ್ಷಿತಾ(20)ಗೆ ಗಾಯಗಳಾಗಿತ್ತು ತಕ್ಷಣ ಆಕೆಯನ್ನು ಮಂಗಳೂರಿನ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆಕೆಗೆ ಚಿಕಿತ್ಸೆ ಫಲಿಸದೆ  ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. 

 

 ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿ ಅಪಘಾತಕ್ಕೆ ಕಾರಣನಾದ ಆರೋಪದಲ್ಲಿ ಮೃತ ಯುವತಿಯ ಗೆಳೆಯ ಮಾರ್ನಾಡಿನ ರಂಜಿತ್ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments