ಹದಗೆಟ್ಟ ರಸ್ತೆಯನ್ನು ದುರಸ್ಥಿಗೊಳಿಸಲು ಪುರಸಭಾಧ್ಯಕ್ಷರಿಗೆ ಮನವಿ ನೀಡಿದ ಗ್ರಾಮಸ್ಥರು

ಜಾಹೀರಾತು/Advertisment
ಜಾಹೀರಾತು/Advertisment

 ಹದಗೆಟ್ಟ ರಸ್ತೆಯನ್ನು ದುರಸ್ಥಿಗೊಳಿಸಲು ಪುರಸಭಾಧ್ಯಕ್ಷರಿಗೆ ಮನವಿ ನೀಡಿದ ಗ್ರಾಮಸ್ಥರು

ಮೂಡುಬಿದಿರೆ: ಕಲ್ಲಬೆಟ್ಟು ಗ್ರಾಮದ ಗಂಟಾಲ್‌ಕಟ್ಟೆ ಚರ್ಚ್‌ನಿಂದ ಕರಿಂಜೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೋಗುವ ರಸ್ತೆಯು ತೀರಾ ಹದಗೆಟ್ಟಿದ್ದರಿಂದ ಸಾರ್ವಜನಿಕರು ಮತ್ತು ವಾಹನಗಳಿಗೆ ಸಂಚರಿಸಲು ಕಷ್ಟಸಾಧ್ಯವಾಗಿದೆ ಆದ್ದರಿಂದ ರಸ್ತೆಯನ್ನು ದುರಸ್ಥಿಗೊಳಿಸುವಂತೆ ಆಗ್ರಹಿಸಿ ವಾಡ್೯ ಸದಸ್ಯ ಸುರೇಶ್ ಕೋಟ್ಯಾನ್  ಮತ್ತು ಸ್ಥಳೀಯರು ಬುಧವಾರ ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ ಅವರಿಗೆ ಮನವಿ ನೀಡಿದರು.

ರಸ್ತೆ ದುರಸ್ಥಿಗೊಳಿಸಲು   ಕೌನ್ಸಿಲ್ ಸಭೆಯಲ್ಲಿ ಹಲವು ಬಾರಿ ಮನವಿ ಸಲ್ಲಿಸಿದರೂ ಕೂಡ ದುರಸ್ಥಿ ಕಾರ್ಯ ನಡೆದಿಲ್ಲ. ಇದರಿಂದ ಬೇಸತ್ತಿರುವ ಸಾರ್ವಜನಿಕರು ಧರಣಿ ಕೂಡಲು ಮುಂದಾಗಿದ್ದು, ತಾವು ಈ ಕೂಡಲೇ ರಸ್ತೆಯನ್ನು ದುರಸ್ಥಿಪಡಿಸಿ ಆ ಭಾಗದ ಸಾರ್ವಜನಿಕರಿಗೆ ನ್ಯಾಯ ಒದಗಿಸಿ ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಆ ಭಾಗದಲ್ಲಿ ಸಂಚರಿಸುವ ಘನತ್ಯಾಜ್ಯ ವಾಹನಗಳನ್ನು ತಡೆಯುವ ಕೆಲಸವನ್ನು ಮಾಡಲು ಅಲ್ಲಿನ ನಾಗರೀಕರು ಮುಂದಾಗಿದ್ದು ಇದಕ್ಕೆ ಪುರಸಭೆಯ ಆಡಳಿತವು ಹೊಣೆಗಾರರಾಗಿರುತ್ತಾರೆ. ಅಲ್ಲದೆ ಮುಂದಿನ ದಿನದಲ್ಲಿ ಕಾಮಗಾರಿ ಮಾಡದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

  ಮನವಿ ಸ್ವೀಕರಿಸಿ ಮಾತನಾಡಿದ ಉಪಾಧ್ಯಕ್ಷ ನಾಗರಾಜ್ ಪೂಜಾರಿ ಅವರು ಪುರಸಭೆಯ ಎಲ್ಲಾ ವಾಡಿ೯ನ ಸದಸ್ಯರಿಗೂ ಅಭಿವೃದ್ಧಿ ಕಾಮಗಾರಿಗಳಿಗೆ ತಲಾ 20 ಲಕ್ಷದಂತೆ ಅನುದಾನವನ್ನು ಮೀಸಲಿರಿಸಲೋಗಿದೆ ಅದರಂತೆ ಸುರೇಶ್ ಕೋಟ್ಯಾನ್ ಅವರ ವಾಡಿ೯ಗೂ ಮೀಸಲಿರಿಸಿ 10 ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ತುತಾ೯ಗಿ ಅಭಿವೃದ್ಧಿ ಆಗಬೇಕಾಗಿರುವ ಕಾಮಗಾರಿಗಳಿಗೆ ಬಳಸಿಕೊಳ್ಳಲು ಅವಕಾಶವಿದೆ ಎಂದರು.

  ಪುರಸಭಾ ಸದಸ್ಯ ಜೊಸ್ಸಿ ಮಿನೇಜಸ್ ಈ ಸಂದಭ೯ದಲ್ಲಿದ್ದರು.

Post a Comment

0 Comments