ಶ್ರೀ ಕ್ಷೇತ್ರ ನಡ್ಯೋಡಿಯಲ್ಲಿ ಬ್ರಹ್ಮಕಲಶೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಶ್ರೀ ಕ್ಷೇತ್ರ ನಡ್ಯೋಡಿಯಲ್ಲಿ ಬ್ರಹ್ಮಕಲಶೋತ್ಸವ 


ಮೂಡುಬಿದಿರೆ: ಸುಮಾರು ನಾಲ್ಕು ಶತಮಾನಗಳ ಇತಿಹಾಸವಿರುವ ಮಾರ್ಪಾಡಿ-ಕಲ್ಲಬೆಟ್ಟು ನಡ್ಯೋಡಿ ಶ್ರೀ ನಾಗಬ್ರಹ್ಮ, ಶ್ರೀ ಕೊಡಮಣಿತ್ತಾಯ, ಶ್ರೀ ಕುಕ್ಕಿನಂತಾಯ, ಶ್ರೀ ಬೈದರ್ಕಳ ಹಾಗೂ ಮಾಯಂದಲೆ ದೇವಿಯ ಕ್ಷೇತ್ರದಲ್ಲಿ ನಾಲ್ಕನೇ ಬ್ರಹ್ಮಕಲಶೋತ್ಸವ ಶುಕ್ರವಾರ ನೆರವೇರಿತು. 

ಮಾರೂರು ಖಂಡಿಗ ರಾಮದಾಸ ಆಸ್ರಣ್ಣ ಪೌರೋಹಿತ್ಯದಲ್ಲಿ ಶುಕ್ರವಾರ ಶ್ರೀ ಮಾಯಂದಲೆ ದೇವಿಯ ಮೂರ್ತಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯಿತು. ಸಾಯಂಕಾಲ ದೈವದ ಗಗ್ಗರ ಸೇವೆ, ಸಾಯಂಕಲ ನೂತನ ರಾಜಗೋಪುರ ಲೋಕಾರ್ಪಣೆ, ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಉತ್ಸವದ ಪ್ರಯುಕ್ತ ಮಂಗಳವಾರ ಕೋಟೆಬಾಗಿಲು ಶ್ರೀ ವೀರ ಮಾರುತಿ ದೇವಸ್ಥಾನದಿಂದ ಶ್ರೀಕ್ಷೇತ್ರ ನಡ್ಯೋಡಿಯವರೆಗೆ ಹಸಿರು ಹೊರೆಕಾಣಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಬುಧವಾರದಂದು ಭಂಡಾರಕೊಟ್ಟಿಗೆ ಗುತ್ತಿನಿಂದ ಶ್ರೀ ದೈವಗಳ ಭಂಡಾರ ಹೊರಟಿತು. ಗುರುವಾರ ಬ್ರಹ್ಮಕಲಶದ ಪೂರ್ವಭಾವಿಯಾಗಿ ಮಂಡಲ ರಚನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷರಾದ ಎಂ.ಪುರುಷೋತ್ತಮ ಶೆಟ್ಟಿ, ಯುವರಾಜ್ ಜೈನ್, ಐತಪ್ಪ ಆಳ್ವ, ಉದಯ ಕುಮಾರ್ ಜೈನ್, ದಾಸಣ್ಣ ಶೆಟ್ಟಿ, ಚಿನ್ನಯ ಕೋಟ್ಯಾನ್, ಆನಂದ ಕುಮಾರ್, ಉಪಾಧ್ಯ÷ಕ್ಷರಾದ ಸುರೇಶ್ ಕೋಟ್ಯಾನ್, ವಿಶ್ವನಾಥ ಕೋಟ್ಯಾನ್, ದಿನೇಶ್ ಶೆಟ್ಟಿ, ಕಾರ್ಯದರ್ಶಿ ಪ್ರಸನ್ನ ಹೆಗ್ಡೆ, ಕೋಶಾಧಿಕಾರಿ ಸುಧೀಶ್ ಹೆಗ್ಡೆ ಸಹಿತ ಪದಾಧಿಕಾರಿಗಳು, ದೈವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಪ್ರದೀಪ್ ರೈ, ಕಾರ್ಯದರ್ಶಿ ಯತೀಶ್ ಕೋಟ್ಯಾನ್, ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ಶೈಲೇಶ್ ಶೆಟ್ಟಿ ಸಹಿತ ಪದಾಧಿಕಾರಿಗಳು, ಗುತ್ತು, ಬರ್ಕೆ ಹಾಗೂ ಭಕ್ತರು ಉಪಸ್ಥಿತರಿದ್ದರು.

Post a Comment

0 Comments