ಮೂಡುಬಿದಿರೆಯಲ್ಲಿ ಸಾರವ, ಕಲಾ ಸಂಗೀತೋತ್ಸವ, ಸಾಧಕರಿಗೆ ಸನ್ಮಾನ
ಮೂಡುಬಿದಿರೆ: ಹೆತ್ತವರು ಮಕ್ಕಳ ವ್ಯಕ್ತಿತ್ವದಲ್ಲಿ ಹುದುಗಿರುವ ಅದ್ಭುತ ಶಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಗುಣವನ್ನು ಬೆಳೆಸುವುದರ ಜತೆಗೆ ಒಳ್ಳೆಯ ವ್ಯಕ್ತಿಯಾಗಿ ಜವಾಬ್ದಾರಿಯುತ ಪ್ರಜೆಯಾಗು ಎಂಬುದನ್ನು ಹೇಳಿ ಕೊಡಬೇಕಾಗಿದೆ ಎಂದು ವಿಧಾನ ಪರಿಷತ್ ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾಣಿ೯ಕ್ ಹೇಳಿದರು.
ಅವರು ಸಾರವ ಸಂಗೀತ ಕಲಾ ಸಂಸ್ಥೆ (ರಿ) ಮೂಡುಬಿದಿರೆ ಇದರ ವತಿಯಿಂದ ದಣಿದ ದನಿಗೆ ರಾಗದ ಬೆಸುಗೆ" ಎಂಬ ಶೀಷಿ೯ಕೆಯೊಂದಿಗೆ ಸಮಾಜ ಮಂದಿರದಲ್ಲಿ ನಡೆದ ಸಾರವ ಕಲಾಸಂಗೀತೋತ್ಸವ-2025' ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬದುಕು ಈಗ ಜಾರು ಬಂಡಿ ಆಟವಾಗಿದೆ. ಜಾರುವ ಹಂತದಲ್ಲಿ ಜಾರದೆ ಗಟ್ಟಿಯಾಗಿ ನಿಂತು ಏನು ಮಾಡಬೇಕೆಂಬುದೇ ಶಿಕ್ಷಣ ಎಂದ ಅವರು ಸನಾತನ ಪರಂಪರೆಯ ಜೀವನ ಮೌಲ್ಯವನ್ನು ನಮ್ಮಲ್ಲಿ ಅಳವಡಿಸಿಕೊಂಡು ಮತ್ತೊಮ್ಮೆ ತಿರುಗಿ ಹಿರಿಯರ ಹೆಜ್ಜೆ ಗುರುತುಗಳನ್ನು ಅನುಸರಿಸುವ ಪ್ರಯತ್ನ ಮಾಡೋಣ ಎಂದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ 'ಮಾಯಕದ ಮಣಿದೀಪ ದೈವರಾಜೆ ಬಬ್ಬುಸ್ವಾಮಿ' ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿ ಮಾತನಾಡಿ ಸಂಗೀತವು ಮನಸಿನ ಒಳಗೆ ಮುದವನ್ನು ನೀಡುತ್ತದೆ. ಮನಸ್ಸು ರಿಲಾಕ್ಸ್ ಮಾಡಲು ಬೇಕು ಆದ್ದರಿಂದ ಸಂಗೀತವನ್ನು ಎಡವಲು ಬಿಡಬೇಡಿ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಉದ್ಯಮಿ ಕೆ. ಶ್ರೀಪತಿ ಭಟ್ ಲೋಗೋ ಅನಾವರಣಗೊಳಿಸಿದರು. ಉಡುಪಿ ಖ್ಯಾತ ವಾಗ್ಮಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ ಗುರು ಶಿಷ್ಯ ಪರಂಪರೆಯ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು.
ಸಾಧಕರಿಗೆ ಸನ್ಮಾನ : ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರುಗಳಾದ ಸಮಾಜ ಸೇವೆಯಲ್ಲಿ ಗೋಪಾಲಕೃಷ್ಣ ಕುಂದರ್, ಶೈಕ್ಷಣಿಕ ಕ್ಷೇತ್ರ ಡಾ.ಗುರುಪ್ರಸಾದ್ ಮಣಿಪಾಲ, ಸಂಗೀತ ಕ್ಷೇತ್ರ ಡಾ. ವೈಷ್ಣವಿರವಿ, ಮಾಧ್ಯಮ ಕ್ಷೇತ್ರ ರಾಮ್ ಅಜೆಕಾರ್, ವಿಜ್ಞಾನ ಕ್ಷೇತ್ರ ಮೌಲ್ಯ ವೈ ಜೈನ್, ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ಶ್ರೇಷ್ಠ ಗೀತ ರಚನಾ ಪ್ರಶಸ್ತಿ ಪುರಸ್ಕೃತ ರಝಾಕ್ ಪುತ್ತೂರು ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಪುರಸಭಾ ಸದಸ್ಯ ಪುರಂದರ ದೇವಾಡಿಗ, ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಎಂ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂಗೀತ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು.
ಸುನೀಲ್ ಪಣಪಿಲ ಸ್ವಾಗತಿಸಿದರು. ಸಾರವ ಕಲಾ ಸಂಗೀತೋತ್ಸವದ ಅಧ್ಯಕ್ಷ ವಿದ್ವಾನ್ ಯಶವಂತ ಎಂ.ಜಿ ಪ್ರಾಸ್ತಾವಿಕವಾಗಿ ಮಾತನಾಡಿ ಕಲಿತ ಜ್ಞಾನವನ್ನು ಇತರರಿಗೆ ಪಸರಿಸಬೇಕೆಂಬ ಉದ್ದೇಶದಿಂದ ಅರಸಿ ಬಂದವರಿಗೆ ಶಿಕ್ಷಣವನ್ನು ನೀಡುತ್ತಿದ್ದೇವೆ. ಸಾಧಕ ವಿದ್ಯಾಥಿ೯ಗಳಿಗೆ ಅವಕಾಶ ನೀಡಬೇಕೆಂದು ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದರು.
ಸಾರವ ಕಲಾ ಸಂಗೀತೋತ್ಸವದ ಕಾರ್ಯದರ್ಶಿ ನವೀನ್ ಕೋಟ್ಯಾನ್ ಹಾಗೂ ಕೋಶಾಧಿಕಾರಿ ದಿನೇಶ್ ಅಶ್ವಥಪುರ ಉಪಸ್ಥಿತರಿದ್ದರು. ಸುನೀಲ್ ಪಣಪಿಲ ಸ್ವಾಗತಿಸಿದರು. ನಿತೇಶ್ ಬಲ್ಲಾಳ್ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.
0 Comments