ವಾಲಿಬಾಲ್ ಆಟದ ಸಂದರ್ಭದಲ್ಲಿ ಕಾಲಿಗೆ ಏಟು:ಭಜರಂಗದಳ ಸಂಚಾಲಕ ಅಭಿಲಾಷ್‌ರನ್ನು ಭೇಟಿಯಾದ ನಳಿನ್ ಕುಮಾರ್ ಕಟೀಲು

ಜಾಹೀರಾತು/Advertisment
ಜಾಹೀರಾತು/Advertisment

 ವಾಲಿಬಾಲ್ ಆಟದ ಸಂದರ್ಭದಲ್ಲಿ ಕಾಲಿಗೆ ಏಟು:ಭಜರಂಗದಳ ಸಂಚಾಲಕ ಅಭಿಲಾಷ್‌ರನ್ನು ಭೇಟಿಯಾದ ನಳಿನ್ ಕುಮಾರ್ ಕಟೀಲು

ವಾಲಿಬಾಲ್ ಆಟ ಆಡುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಕಾಲು ಮುರಿತಕ್ಕೊಳಗಾಗಿ ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂಡುಬಿದಿರೆ ಪ್ರಖಂಡ ಭಜರಂಗದಳ ಸಂಚಾಲಕ ಅಭಿಲಾಷ್ ಅರ್ಜುನಾಪುರರವರನ್ನು ನಿಕಟಪೂರ್ವ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲುರವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಮೂಡುಬಿದಿರೆ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಪ್ರಸಾದ್ ಕುಮಾರ್, ಬಿಜೆಪಿ ಪ್ರಮುಖ್ ಗೋಪಾಲ್ ಶೆಟ್ಟಿಗಾರ್, ಮಂಡಲ ಉಪಾಧ್ಯಕ್ಷ ಸೂರಜ್ ಜೈನ್ ಮಾರ್ನಾಡ್, ಬಿಜೆಪಿ ಮುಖಂಡ ದಿವ್ಯವರ್ಮ ಬಳ್ಳಾಲ್, ಬಿಜೆಪಿ ಜಿಲ್ಲಾ ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ಸದಸ್ಯ ಸುನಿಲ್ ಪಣಪಿಲ, ಯುವಮೋರ್ಚಾ ಮಂಡಲ ಉಪಾಧ್ಯಕ್ಷ ಸಚಿನ್ ಪಣಪಿಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

Post a Comment

0 Comments