*ಹಿಂದುಸ್ತಾನಿ ಸಂಗೀತ ಪರಂಪರೆಯ ಗಾನಯೋಗಿ ವಿ. ಎನ್ .ಎಸ್. ಭಂಡಾರಿ: ಡಾ. ಶಿರೂರು*

ಜಾಹೀರಾತು/Advertisment
ಜಾಹೀರಾತು/Advertisment

 *ಹಿಂದುಸ್ತಾನಿ ಸಂಗೀತ ಪರಂಪರೆಯ ಗಾನಯೋಗಿ ವಿ. ಎನ್ .ಎಸ್. ಭಂಡಾರಿ: ಡಾ. ಶಿರೂರು*

ಹಿಂದುಸ್ತಾನಿ ಹಿರಿಯ ಸಂಗೀತ ವಿದ್ವಾಂಸ ಎನ್.ಎಸ್. ಭಂಡಾರಿ ಅವರು ಕಳೆದ 35 ವರ್ಷಗಳಿಂದ ಮೂಡುಬಿದಿರೆ ಪರಿಸರದಲ್ಲಿ ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಬೆಳೆಸುತ್ತಾ ಬಂದಿದ್ದಾರೆ. ತಮ್ಮ ಸಂಗೀತದ ಜ್ಞಾನ ಪರಂಪರೆಯನ್ನು ಯುವ ಜನಾಂಗಕ್ಕೆ ನೀಡುವುದರ ಮೂಲಕ ಮೂಡುಬಿದಿರೆಯಲ್ಲಿ ಗಾನ ಲೋಕವನ್ನು ನಿರ್ಮಿಸಿದ್ದಾರೆ. ಹಿಂದುಸ್ತಾನಿ ಸಂಗೀತ ತರಗತಿ ನಡೆಸುವುದರ ಮೂಲಕ ಹಿಂದುಸ್ತಾನಿ ಸಂಗೀತದ  ಪರಿಸರವನ್ನು ನಿರ್ಮಾಣ ಮಾಡಿದ್ದಾರೆ.  ನಿಜ ಅರ್ಥದಲ್ಲಿ ಎನ್.ಎಸ್. ಭಂಡಾರಿ ಯವರು ಹಿಂದುಸ್ತಾನಿ ಸಂಗೀತ ಪರಂಪರೆಯ ಗಾನಯೋಗಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ಹೋಬಳಿ ಘಟಕದ ಅಧ್ಯಕ್ಷರಾದ ಡಾ.ರಾಮಕೃಷ್ಣ ಶಿರೂರು ತಿಳಿಸಿದರು. 

ತಮ್ಮ ಸಂಗೀತ ಗುರುಗಳಾಗಿರುವ ಶ್ರೀ ಎನ್. ಎಸ್. ಭಂಡಾರಿ ಅವರ ನಿಸ್ವಾರ್ಥ ಮನೋಭಾವ ಮತ್ತು ಮೃದು ಸ್ವಭಾವದ ಕುರಿತು ತಿಳಿಸುತ್ತಾ ಕಳೆದ ನಲವತ್ತೈದು ವರ್ಷಗಳಿಂದ ಸಂಗೀತ ತರಗತಿಯನ್ನು ನಡೆಸುವುದರ ಮೂಲಕ ಗಾನ ಲೋಕವನ್ನು ಸೃಷ್ಟಿಸಿದ್ದಾರೆ. ಹಿಂದುಸ್ತಾನಿ ಸಂಗೀತವನ್ನು ಹಾಡುವ ಗಾಯಕರನ್ನು ಮತ್ತು ಸಂಗೀತವನ್ನು ಕೇಳುವ ವರ್ಗವನ್ನು ನಿರ್ಮಾಣ ಮಾಡುವುದರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಸ್ತಾನಿ ಸಂಗೀತದ ಗಾನಕ್ರಾಂತಿಯ ಶಕಪುರುಷರಾಗಿದ್ದಾರೆ ಎಂದರು. 

ತಮ್ಮ ಗುರುಗಳ ಸದ್ಗುಣಗಳನ್ನು ಮತ್ತು ಆತ್ಮೀಯವಾಗಿ ಸಂಗೀತವನ್ನು ಕಲಿಸುವ ಪದ್ಧತಿಯನ್ನು,  ಸಂಗೀತ ಕಲಿಕೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ಭಾವ ಪರವಶರಾದರು.ತಮ್ಮ ಗುರುಗಳಿಗೆ ಕೃತಜ್ಞತೆಯನ್ನು

ಸಲ್ಲಿಸುವುದರ ಮೂಲಕ ಗುರುವಂದನೆ  ಸಲ್ಲಿಸಿದರು.


ನಂತರ ವಿದ್ವಾನ್ ಎನ್.ಎಸ್. ಭಂಡಾರಿ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.

ಎನ್.ಎಸ್.ಭಂಡಾರಿಯವರು

 ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ತನ್ನ ಸಂಗೀತ ಕ್ಷೇತ್ರದ ಸೇವೆಯನ್ನು ಗುರುತಿಸಿ ಗೌರವಿಸಿದ ಮೂಡುಬಿದಿರೆ ಹೋಬಳಿ ಕನ್ನಡ ಸಾಹಿತ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. 




ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕದ ಕಾರ್ಯದರ್ಶಿ ಶ್ರೀ ಸದಾನಂದ ನಾರಾವಿ ಅವರು ಸನ್ಮಾನಿತರ  ಕುರಿತು ಅಭಿನಂದನೆಯ ಮಾತುಗಳನ್ನು ಆಡಿದರು.


ಮೂಡುಬಿದಿರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ದೊರೆಸ್ವಾಮಿ ಕೆ. ಎನ್. ಅವರು ಅತಿಥಿ ಗಣ್ಯರನ್ನು ಮತ್ತು ಆಗಮಿಸಿರುವ ಎಲ್ಲರನ್ನೂ ಸ್ವಾಗತಿಸಿದರು.


ಕಾರ್ಯಕ್ರಮದಲ್ಲಿ ಕ.ಸಾ. ಪ.ಮೂಡುಬಿದಿರೆ ಹೋಬಳಿ ಘಟಕದ ಜೊತೆ ಕಾರ್ಯದರ್ಶಿ, ಶ್ರೀಮತಿ ನಾಗರತ್ನ ಬಿ., ಪದಾಧಿಕಾರಿಗಳಾದ ಶ್ರೀಮತಿ ಅನ್ನಪೂರ್ಣ, ಶ್ರೀಮತಿ ರೇಣುಕಾ, ಶ್ರೀಮತಿ ಪ್ರೇಮ, ಎನ್.ಎಸ್. ಭಂಡಾರಿ ಅವರ ಪತ್ನಿ ಶ್ರೀಮತಿ ಸುನಂದಾ ಭಂಡಾರಿ ಮತ್ತು ಮಕ್ಕಳು, ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ಹೋಬಳಿ ಘಟಕದ ಜೊತೆ ಕಾರ್ಯದರ್ಶಿ ಶ್ರೀಮತಿ ನಾಗರತ್ನ ಬಿ. ಅವರು ಕಾರ್ಯಕ್ರಮ ನಿರ್ವಹಿಸಿ ಸನ್ಮಾನ ಪತ್ರವನ್ನು ವಾಚಿಸಿದರು. ಶ್ರೀಮತಿ ಅನ್ನಪೂರ್ಣ ಅವರು ಧನ್ಯವಾದ ಸಲ್ಲಿಸಿದರು.

Post a Comment

0 Comments