ನಾಳೆಯಿಂದ ಶಿರ್ತಾಡಿ ಕಂದಿರು ಕ್ಷೇತ್ರದಲ್ಲಿ ವಾರ್ಷಿಕ ಪೂಜಾ ಮಹೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ನಾಳೆಯಿಂದ ಶಿರ್ತಾಡಿ ಕಂದಿರು ಕ್ಷೇತ್ರದಲ್ಲಿ  ವಾರ್ಷಿಕ ಪೂಜಾ ಮಹೋತ್ಸವ

ಮೂಡುಬಿದಿರೆ: ಶ್ರೀ ಆದಿಶಕ್ತಿ ದುರ್ಗಾಂಬಿಕಾ ದೇವಸ್ಥಾನ, ಶ್ರೀ ಕ್ಷೇತ್ರ ಕಂದಿರು, ಶಿರ್ತಾಡಿ ಇಲ್ಲಿ ನಾಳೆಯಿಂದ (ಜ.30-ಫೆ.1) ವಾರ್ಷಿಕ ಪೂಜಾ ಮಹೋತ್ಸವ ಪ್ರಯುಕ್ತ ಮಹಾ ಚಂಡಿಕಾಯಾಗ- ಲಕ್ಷ ಕುಂಕುಮಾರ್ಚನೆ, ಧನ್ವಂತರಿ ಹೋಮ,ಬಲಿ ಉತ್ಸವ,ನಾಗತನುತರ್ಪಣಾ,ಕಲ್ಕುಡ- ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ಹಾಗೂ ಸ್ಥಾಪಕ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಸೋಮನಾಥ ಶಾಂತಿ ಅವರು ತಿಳಿಸಿದ್ದಾರೆ.

30 ರಂದು ಉದಯಕಾಲದಿಂದ ಸ್ವಸ್ತಿ ಪುಣ್ಯ ವಾಚನ ಗುರುಪೂಜೆ,ಗಣಯಾಗ,ದೇವತಾ ಪ್ರಾರ್ಥನೆ,ತೋರಣಮೂರ್ತ,ಪ್ರಧಾನ ಹೋಮ,ನವಕ ಕಲಶಾಭಿಷೇಕ,ಶ್ರೀಚಕ್ರ ಯಂತ್ರಾರಾದನೆ,ಮಹಾಪೂಜೆ,ಕಲ್ಕುಡ ದೈವದರ್ಶನ,ಅನ್ನಪ್ರಸಾದ, ಸಾಯಂಕಾಲ 4 ರಿಂದ ಸರ್ವೈಶ್ವರ್ಯ ಪೂಜೆ,ಸಾರ್ವಜನಿಕ ಸ್ತ್ರೀಯರಿಂದ ಸಹಸ್ರ ಕುಂಕುಮಾರ್ಚನೆ,ವಿವಿಧ ಭಜನಾ ಮಂಡಳಿಗಳಿಂದ ಭಜನೆ,ರಂಗಪೂಜೆ ಹಾಗೂ ಅನ್ನಪ್ರಸಾದ ನಡೆಯಲಿದೆ.

31 ರಂದು ಉದಯಕಾಲದಿಂದ ಪಂಚದುರ್ಗಾ ಹೋಮ,ವವಕ ಕಲಶಾಭಿಷೇಕ,ಮೃತ್ಯುಂಜಯ ಜಪ,ನವಗ್ರಹ ಪೂಜೆ,ಕಾಲ ಸರ್ಪ ಶಾಂತಿ,ಧನ್ವಂತರಿ ಹೋಮ,ಮಹಾಪೂಜೆ,ಅನ್ನಸಂತರ್ಪಣೆ,ಸಾಯಂಕಾಲ 4 ರಿಂದ ಸಾರ್ವಜನಿಕ ಸ್ತ್ರೀಯರಿಂದ ಸಹಸ್ರ ಕುಂಕುಮಾರ್ಚನೆ,ವಿವಿಧ ಭಜನಾ ಮಂಡಳಿಗಳಿಂದ ಭಜನೆ,ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಫೆ.1ರಂದು ಉದಯಕಾಲದಿಂದ ನವದುರ್ಗಾ ಹೋಮ,ನವಕ ಕಲಶಾಭಿಷೇಕ,ಮಹಾ ಚಂಡಿಕಾಯಾಗ,ಸಾರ್ವಜನಿಕ ಸ್ತ್ರೀಯರಿಂದ ಲಕ್ಷ ಕುಂಕುಮಾರ್ಚನೆ,11-30ಕ್ಕೆ ಮಹಾ ಚಂಡಿಕಾಯಾಗದ ಸಂಪೂರ್ಣಾಹುತಿ,12 ಕ್ಕೆ ಸ್ಥಾಪಕ ಸದಸ್ಯರಿಗೆ ಸನ್ಮಾನ,ಮಹಾಪೂಜೆ,ಭೂತಬಲಿ,ಅನ್ನ ಸಂತರ್ಪಣೆ,ಸಾಯಂಕಾಲ 4ರಿಂದ ಸಾರ್ವಜನಿಕ ಶನಿಪೂಜೆ ಮತ್ತು ಸತ್ಯನಾರಾಯಣ ಪೂಜೆ,ಸಂಜೆ 5ರಿಂದ ಆಶ್ಲೇಷ ಬಲಿ,ನಾಗ ತನು ತರ್ಪಣ ಸೇವೆ,ಭಜನೆ,ಪ್ರಸನ್ನ ಪೂಜೆ,ಬಲಿ ಉತ್ಸವ ,ಮಹಾಪೂಜೆ,ಅನ್ನಪ್ರಸಾದ, ಬಳಿಕ ಕಲ್ಕುಡ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಸೋಮನಾಥ ಶಾಂತಿ,ಉತ್ಸವ ಸಮಿತಿ ಅಧ್ಯಕ್ಷ ಜಯಾನಂದ ಶೆಟ್ಟಿ ಗೇಂದೊಟ್ಟು ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾದ ಹರೀಶ್ ಆಚಾರ್ಯ ನೆಲ್ಲಿಕಾರು ಅವರು ತಿಳಿಸಿದ್ದಾರೆ.

Post a Comment

0 Comments