ಮೂಡುಬಿದಿರೆಯ ಅಯನಾ ಪಿರೇರಾ ಗೆ ಶಿವರಾಮ ಕಾರಂತ ಬಾಲ ಪ್ರತಿಭಾ ಪುರಸ್ಕಾರ
ಮೂಡುಬಿದಿರೆ : ಡಾ|ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಶಿವರಾಮ ಕಾರಂತ ಪ್ರತಿಷ್ಠಾನ (ರಿ.), ಉಡುಪಿ ಹಾಗೂ ಕೋಟತಟ್ಟು ಗ್ರಾಮ ಪಂಚಾಯತ್ಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ| ಶಿವರಾಮ ಕಾರಂತ ಬಾಲಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮೂಡುಬಿದಿರೆ ರೋಟರಿ ಸೆಂಟ್ರಲ್ ಸ್ಕೂಲ್ ನ ಐದನೇ ತರಗತಿಯ ವಿದ್ಯಾರ್ಥಿನಿ ಅಯನಾ ಪಿರೇರಾ ಬಹುಮುಖ ಪ್ರತಿಭೆ ವಿಭಾಗದಲ್ಲಿ ಬಾಲ ಪ್ರತಿಭಾ ಪುರಸ್ಕಾರ ಸ್ವೀಕರಿಸಿದರು.
ಅಯನಾ ಚಿತ್ರಕಲಾ, ಶೈಕ್ಷಣಿಕ, ಭಾಷಣ, ಕರಾಟೆ ಮೊದಲಾದ ವಿಷಯಗಳಲ್ಲಿ ಪ್ರತಿಭಾನ್ವಿತೆಯಾಗಿದ್ದು ಇದನ್ನು ಗುರುತಿಸಿ ಪುರಸ್ಕಾರ ನನ್ನು ನೀಡಲಾಗಿದೆ.
ಸಮಾರಂಭದಲ್ಲಿ ಡಾ. ಕಾರಂತ ಪ್ರತಿಷ್ಠಾನ ಕೋಟ ಇದರ ಆಡಳಿತ ನಿರ್ದೇಶಕ ಕೋಟ ಶ್ರೀನಿವಾಸ ಪೂಜಾರಿ, ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮೊದಲಾದವರಿದ್ದರು
0 Comments