ಸಾಯಿ ಮಾನಾ೯ಡ್ ಸೇವಾ ಸಂಘದಿಂದ ಚಿಕಿತ್ಸೆ ಗೆ ನೆರವು

ಜಾಹೀರಾತು/Advertisment
ಜಾಹೀರಾತು/Advertisment

 ಸಾಯಿ ಮಾನಾ೯ಡ್ ಸೇವಾ ಸಂಘದಿಂದ ಚಿಕಿತ್ಸೆ ಗೆ ನೆರವು


ಮೂಡುಬಿದಿರೆ: ಕ್ಯಾನ್ಸರ್ ನಿಂದ ಬಳಲುತ್ತಿರುವ ಬಡ ವ್ಯಕ್ತಿಯೋವ೯ರ ಚಿಕಿತ್ಸೆ ಗೆ ಪಡುಮಾನಾ೯ಡು ಅಮನ ಬೆಟ್ಟುವಿನ ಸಾಯಿ ಮಾನಾ೯ಡ್ ಸೇವಾ ಸಂಘ ಟ್ರಸ್ಟ್ (ರಿ) ನೆರವು ನೀಡಿದೆ.

   ಪಡುಮಾರ್ನಾಡು ಗ್ರಾಮದ  ಅಬ್ದುಲ್ ಗಫೂರ್ ಎಂಬವರು ಕೆಲವು ವರುಷಗಳಿಂದ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದುಕೊಳ್ಳುತಿದ್ದರು. ಆದರೆ ಇದೀಗ ತಪಾಸಣೆ ನಡೆಸಿದ ವೈದ್ಯರು ಗಫೂರ್ ಅವರು ಕ್ಯಾನ್ಸರ್ ಗೆ ತುತ್ತಾಗಿದ್ದಾರೆಂದು ಅದು ನಾಲ್ಕನೇ ಹಂತದಲ್ಲಿದೆ ಎಂದು ತಿಳಿಸಿದ್ದಾರೆ. 

ಗಫೂರ್ ಅವರಿಗೆ ಓವ೯ ಪುತ್ರನಿದ್ದು, ಮೂವರು ಪುತ್ರಿಯರಿದ್ದಾರೆ. ಪುತ್ರ ಜೀವನೋಪಾಯಕ್ಕಾಗಿ ಆಟೋ ಓಡಿಸುತ್ತಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ ಸಾವಿರಾರು ರೂಗಳನ್ನು ಖಚು೯ ಮಾಡಿದ್ದು ಮುಂದಿನ ಚಿಕಿತ್ಸೆಗೆ ಹಣ ಹೊಂದಿಸಲು ಕಷ್ಟ ಸಾಧ್ಯವಾಗಿದೆ. ಕುಟುಂಬ ಅಸಹಾಯಕ ಪರಿಸ್ಥಿತಿಯನ್ನು ಕಂಡು ಸಾಯಿ ಮಾನಾ೯ಡ್ ಸೇವಾ ಸಂಘವು ಚಿಕಿತ್ಸೆಗಾಗಿ ರೂ 10,000 ವನ್ನು ಹಸ್ತಾಂತರಿಸಿದೆ.



Post a Comment

0 Comments