ಸಾಯಿ ಮಾನಾ೯ಡಿನ 50ನೇ ಸೇವಾ ಯೋಜನೆ *ಅಸಹಾಯಕ ಕುಟುಂಬದ ದುರಸ್ಥಿಗೊಳಿಸಿದ ಮನೆ ಹಸ್ತಾಂತರ

ಜಾಹೀರಾತು/Advertisment
ಜಾಹೀರಾತು/Advertisment

 ಸಾಯಿ ಮಾನಾ೯ಡಿನ 50ನೇ ಸೇವಾ ಯೋಜನೆ

*ಅಸಹಾಯಕ ಕುಟುಂಬದ ದುರಸ್ಥಿಗೊಳಿಸಿದ ಮನೆ ಹಸ್ತಾಂತರ 

ಮೂಡುಬಿದಿರೆ: ಇಲ್ಲಿನ ಪಡುಮಾರ್ನಾಡಿನ ಸಾಯಿ ಮಾರ್ನಾಡ್ ಸೇವಾ ಸಂಸ್ಥೆಯ 50 ನೇ ಸೇವಾ ಯೋಜನೆಯಡಿಯಲ್ಲಿ ಮತ್ತು ಕಟೀಲ್ ಫ್ರೆಂಡ್ಸ್ ಕ್ರಿಕೆಟ್ ಟೀಮ್ ದುಬೈ ಇವರ ಸಹಕಾರದಲ್ಲಿ ಪಡುಮಾರ್ನಾಡು ಗ್ರಾಮದ ಗುಮಡಬೆಟ್ಟುವಿನ ಸುನೀತಾ ಪೂಜಾರಿಯವರ ದುಸ್ಥಿತಿಯಲ್ಲಿದ್ದ ಮನೆಯನ್ನು ನವೀಕರಿಸಲಾಗಿದ್ದು ,ಇದರ ಅಂಗವಾಗಿ ಗಣಹೋಮ ಹಾಗೂ ಸಭಾ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.


   ಮಾನಾ೯ಡು ಗರಡಿಯ ಅನುವಂಶಿಕ ಆಡಳಿತ ಮೊಕ್ತೇಸರ ರಾಜೇಶ್ ಬಲ್ಲಾಳ್ ಸಭಾ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪುಣ್ಯದ ಕೆಲಸ ಮಾಡಿದರೆ ಅದರ ಫಲ ನಮಗೆ ಲಭಿಸುತ್ತದೆ. ಉತ್ತಮ ಕೆಲಸ ಮಾಡಲು ಮೊದಲು ನಮಗೆ  ಒಳ್ಳೆ ಮನಸು ಬೇಕು.ವಾಸ್ತುವಿಗಿಂತ ಮನಸ್ಥಿತಿ ಮುಖ್ಯವಾಗಿದ್ದರೆ ಎಲ್ಲಾ ಕೆಲಸಗಳು ಸರಾಗವಾಗಿ ನಡೆಯಲು ಸಾಧ್ಯ ಎಂದರು.

ಹಿಂದೂ ಜಾಗರಣ ವೇದಿಕೆಯ ಸಂದೀಪ್ ಸುವಣ೯ ಕೆಲ್ಲಪುತ್ತಿಗೆ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಹಲವಾರು ಕಡೆಯಲ್ಲಿ ಕೆಲವಾರು ಸೇವಾ ಯೋಜನೆಗಳು ನಡೆಯುತ್ತಿರುತ್ತದೆ. ಆದರೆ ಮಾನಾ೯ಡಿನ ಮಣ್ಣಿನಲ್ಲಿ ವಿಶೇಷವಾದ ಸೇವಾ ಕಾಯ೯ ನಡೆಯುತ್ತಿದೆ. ಮೊದಲು ಅನಾರೋಗ್ಯ ಪೀಡಿತರ ಚಿಕಿತ್ಸೆಗಾಗಿ ಸಹಾಯಧನ ನೀಡುತ್ತಾ ಬಂದಿದ್ದು, ಇದೀಗ ಬಡವರಿಗೆ ಮನೆ ದುರಸ್ಥಿ ಮಾಡಿ ನೀಡುವ ಮೂಲಕ ದೇವತಾ ಕೆಲಸವನ್ನು ಕೈಗೊಂಡು ಬಡವರ ಕಣ್ಣೀರನ್ನು ಒರೆಸಿ ಉತ್ತಮ ಕೆಲಸವನ್ನು ಸಾಯಿ ಮಾನಾ೯ಡ್ ಸಂಸ್ಥೆ ನಿವ೯ಹಿಸಿರುವುದಕ್ಕೆ ಅಭಿನಂದಿಸಿದರು.


 ಬಿಜೆಪಿ ಮುಲ್ಕಿ-ಮೂಡುಬಿದಿರೆ  ಮಂಡಲದ ಉಪಾಧ್ಯಕ್ಷ ಸೂರಜ್ ಜೈನ್ ಮಾನಾ೯ಡ್ ಮಾತನಾಡಿ ಸಾಯಿ ಮಾನಾ೯ಡ್ ತಂಡವು ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

ಪಡುಮಾನಾ೯ಡು ಗ್ರಾ. ಪಂ. ಅಧ್ಯಕ್ಷ ವಾಸುದೇವ ಭಟ್ ಅಂಗೇರಿ, ತಾ. ಪಂ. ಮಾಜಿ ಸದಸ್ಯ ಪ್ರಶಾಂತ್ ಅಮೀನ್ ಮತ್ಲಮಾರ್, ಬನ್ನಡ್ಕ ಸಾವ೯ಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ದಯಾನಂದ ಪೈ, ಪಡುಮಾನಾ೯ಡು ಶನೀಶ್ವರ ಪೂಜಾ ಸಮಿತಿ ಅಧ್ಯಕ್ಷ ರಮೇಶ್ ಶೆಟ್ಟಿ ಪಣರೊಟ್ಟು, ನಿವೃತ್ತ ವಾಣಿಜ್ಯ ಅಧಿಕಾರಿ ಯತೀಂದ್ರ ರಾವ್ ಪಾಡಿಮನೆ, ಗ್ರಾ. ಪಂ. ಸದಸ್ಯ ರಮೇಶ್ ಶೆಟ್ಟಿ, ದೇವರಾಜ್ ಸುವಣ೯ ಪೊಸಲಾಯಿ, ಪಾಪಣ್ಣ ಪೂಜಾರಿ ಗುಮಡಬೆಟ್ಟು, ಪತ್ರಕತೆ೯ ಪ್ರೇಮಶ್ರೀ ಕಲ್ಲಬೆಟ್ಟು, ನಿವೃತ್ತ ಮುಖ್ಯ ಶಿಕ್ಷಕ ಜಯ ಬಿ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಶುಭ ಹಾರೈಸಿದರು. ಸಂಸ್ಥೆಯ ಅಧ್ಯಕ್ಷ ಯತೀಶ್ ಮಾನಾ೯ಡ್,    ಸಂಸ್ಥೆಯ ಸಂತೋಷ್ ಶೆಟ್ಟಿ ಮತ್ತು ಪದಾಧಿಕಾರಿಗಳು ಈ ಸಂದಭ೯ದಲ್ಲಿದ್ದರು.


ಪ್ರಜ್ವಲ್ ಪೂಜಾರಿ ಸ್ವಾಗತಿಸಿದರು. ಸಚಿನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮ್ ಕುಮಾರ್ ಕಾಯ೯ಕ್ರಮ ನಿರೂಪಿಸಿದರು. ಸುದಶ೯ನ್ ವಂದಿಸಿದರು.

Post a Comment

0 Comments