ಬನಡ್ಕ ಪರಿಸರದಲ್ಲಿ ಹೆಜ್ಜೆನು ಗುಂಪು ದಾಳಿ

ಜಾಹೀರಾತು/Advertisment
ಜಾಹೀರಾತು/Advertisment

 ಬನಡ್ಕ ಪರಿಸರದಲ್ಲಿ ಹೆಜ್ಜೆನು  ಗುಂಪು ದಾಳಿ 

ಮೂಡುಬಿದಿರೆ:  ರಾಷ್ಟ್ರೀಯ ಹೆದ್ದಾರಿಯ ಆಲಂಗಾರು ಬನ್ನಡ್ಕದ ಮಧ್ಯೆ  ಅಮನ್ ಬೆಟ್ಟು ಕ್ರಾಸ್  ಬಳಿ ರಿಕ್ಷಾ ನಿಲ್ದಾಣದ ಪಕ್ಕದಲ್ಲಿರುವ ಸೋನ್ಸ್ ಫಾರ್ಮ್ ಬಳಿ ವಲಸೆ ಬಂದಿದ್ದ ಹೆಜ್ಜೇನುಗಳು ಮಕ್ಕಳು ಮತ್ತು ಮಹಿಳೆಯರ ಮೇಲೆ ದಾಳಿ ನಡೆಸಿದೆ.

  ವಲಸೆ ಬಂದಿರುವ ಹೆಜ್ಜೇನಿನ ಗುಂಪು  ಸುಮಾರು ನಾಲ್ಕೈದು ದಿನಗಳಿಂದ  ಸೋನ್ಸ್ ಫಾಮ್ ೯ನ  ಗೇಟಿನ ಒಳಗಡೆ ವಾಸ್ತವ್ಯ  ಹೂಡಿದ್ದು  ಇದರ  ಗುಂಪಿನ ಮೇಲೆ ಗಿಡುಗ ದಾಳಿ ಮಾಡಿದ್ದು ಈ ಸಂದರ್ಭ ಹೆಜ್ಜೇನುಗಳು ರೋಶಗೊಂಡು  ಶಾಲಾ ಮಕ್ಕಳು ಮಹಿಳೆಯರು ಮಗು ಎನ್ನದೆ ಅಕ್ಕಪಕ್ಕದಲ್ಲಿದ್ದವರ 10 ಹತ್ತು ಜನರ ಮೇಲೆ ದಾಳಿ ಮಾಡಿದ್ದು ಈ ಬಗ್ಗೆ  ಸಂಬಂಧಪಟ್ಟವರು ಗಮನಹರಿಸುವಂತೆ ಸಾರ್ವಜನಿಕರು ವಿನಂತಿಸಿದ್ದಾರೆ.

Post a Comment

0 Comments