ಜಿಲ್ಲೆಯ ಮೂವರಿಗೆ ರಾಷ್ಟ್ರೀಯ ಮೇಸ್ಸೆಂಜರ್ ಆಫ್ ಫೀಸ್ ಸ್ಟಾರ್ ಅವಾರ್ಡ್ : ಪಿ.ಜಿ.ಆರ್ ಸಿಂಧ್ಯಾ

ಜಾಹೀರಾತು/Advertisment
ಜಾಹೀರಾತು/Advertisment

 ಜಿಲ್ಲೆಯ ಮೂವರಿಗೆ ರಾಷ್ಟ್ರೀಯ ಮೇಸ್ಸೆಂಜರ್ ಆಫ್ ಫೀಸ್ ಸ್ಟಾರ್. ಅವಾರ್ಡ್   : ಪಿ.ಜಿ.ಆರ್ ಸಿಂಧ್ಯಾ

ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟೀಯ ಸಂಸ್ಥೆಯು ವಿಭಿನ್ನ ರೀತಿಯಲ್ಲಿ ಸೇವೆಯನ್ನು  ಮಾಡುತ್ತಿರುವವರನ್ನು ಗುರುತಿಸಿ  ಪದಕಗಳನ್ನು ನೀಡಿ ಗೌರವಿಸುತ್ತಿದ್ದು ೨೦೨೩ ನೇ ವರ್ಷದಲ್ಲಿ ರಾಷ್ಟ್ರ ಮಟ್ಟದಲ್ಲಿ ಕೊಡ ಮಾಡುವ ``ಮೇಸೆಂಜರ್ ಆಫ್ ಪೀಸ್ ಸ್ಟಾರ್ ಅವಾರ್ಡ್'' ಕರ್ನಾಟಕದ ೮ ಜನರಿಗೆ ಪ್ರಶಸ್ತಿ ಲಭಿಸಿದ್ದು ಅದರಲ್ಲಿ ದ.ಕ ಜಿಲ್ಲೆಯ ೩ ಅಭ್ಯರ್ಥಿಗಳಿಗೆ ಲಭಿಸಿರುವುದಾಗಿ   ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಅವರು ಶುಕ್ರವಾರ ಡಾ. ಮೋಹನ್  ಆಳ್ವ ಅವರ  ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಭಾರತ್  ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ೭೪ ನೇ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದು , ಕರ್ನಾಟಕವು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಪ್ರದರ್ಶಿಸಿ, ಹಲವಾರು ಉನ್ನತ ಸ್ಥಾನಗಳನ್ನು ಪಡೆದುಕೊಂಡಿದ್ದು, ಮೊದಲ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದ್ದು  ದ.ಕ ಜಿಲ್ಲೆಯಲ್ಲಿ ವಯಸ್ಕರ ವಿಭಾಗದಲ್ಲಿ ದ.ಕ ಜಿಲ್ಲಾ ಸ್ಕೌಟ್ಸ್-ಗೈಡ್ಸ್ನ ಕೋಶಾಧಿಕಾರಿ ನವೀನ್‌ಚಂದ್ರ ಅಂಬೂರಿ, ದ.ಕ ಜಿಲ್ಲೆಯ ಭಾರತ್ ಸ್ಕೌಟ್ಸ್ ಗೈಡ್ಸ್ನ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್‌ರಾಜ್.ಕೆ ಹಾಗೂ ಯುವ ವಿಭಾಗದಲ್ಲಿ ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜ್‌ನ ರೋವರ್ ಸ್ಕೌಟ್ಸ್ ಲೀಡರ್ ಚಂದ್ರಾಕ್ಷ ಅವರುಗಳಿಗೆ  ಅವಾರ್ಡ್ ಲಭಿಸಿರುವುದಾಗಿ ತಿಳಿಸಿದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಮಾತನಾಡಿ  ಸರಕಾರಿ ಮಟ್ಟದಲ್ಲಿ ಇಲಾಖೆಗಳು ನಡೆಸುತ್ತಿರುವ ಕ್ರೀಡೋತ್ಸವ ಹಾಗೂ ಪ್ರತಿಭಾಕಾರಂಜಿಯಂತಹ ಕಾರ್ಯಕ್ರಮಗಳು ವಿಶ್ವಾಸ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸ್ಕೌಟ್-ಗೈಡ್ ಇದನ್ನು ಗಂಭೀರವಾಗಿ ಪರಿಗಣಿಸಿ 

ಯಾವುದೇ ಮಾಧ್ಯಮ  ಕನ್ನಡ, ಇಂಗ್ಲೀಸ್, ಸಿಬಿಎಸ್, ಐಸಿಎಸ್, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಅಥವಾ  ವೃತ್ತಿಪರ ಪದವೀಧರರಾಗಿರಲಿ ಅವರನ್ನು ಕೇಂದ್ರವಾಗಿರಿಸಿಕೊಂಡು ಜಿಲ್ಲಾ ಮಟ್ಟದಲ್ಲಿ  ಸ್ಕೌಟ್-ಗೈಡ್ ಕ್ರೀಡೊತ್ಸವ ಹಾಗೂ  ಕಲೋತ್ಸವವನ್ನು  2025 ರ ಜನವರಿ ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆಸಲಾಗುವುದೆಂದು ತಿಳಿಸಿದರು.  ಈ ಬಾರಿ ವಿಶೇಷವಾಗಿ ವಿರಾಸತ್ ಸಂದರ್ಭದಲ್ಲಿ ಪಿ.ಆರ್ ಸಿಂಧ್ಯಾ ಅವರ ಮನವಿಯ ಮೇರೆಗೆ ರಾಜ್ಯಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ &ರೇಂಜರ್ಸ್  ಸಾಂಸ್ಕçತಿಕ ಉತ್ಸವವನ್ನು  ವಿರಾಸತ್ ಸಂದರ್ಭದಲ್ಲಿ ಆಯೋಜಿಸಿದ್ದು  ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ದೇಶಿಯತೆ, ವಿವಿಧ ಕಲೆಗಳ ಅನಾವರಣ, ಪರಿಸರ ಪ್ರಜ್ಞೆ, ಸಾಹಸ ಕ್ರೀಡೆಗಳು, ಸೌಹಾರ್ದತೆ ಮತ್ತು ಸಾಮರಸ್ಯದ ಬಗ್ಗೆ ಮನವರಿಕೆ, ಕೃಷಿ ಬದುಕು, ಕರಕುಶಲಗಳ ತಿಳುವಳಿಕೆ, ದೇಶೀಯ ಆಹಾರ ಪದಾರ್ಥಗಳ ಪರಿಚಯ, ಶಿಸ್ತು, ಸಮಯಪ್ರಜ್ಞೆ, ಸ್ವಚ್ಛತೆಯ ಪ್ರಾತ್ಯಕ್ಷಿಕೆಗಳ ಕಲಿಕೆ, ಮನೋರಂಜನೆಗಳು, ಯೋಗ, ಪ್ರಾಣಾಯಾಮ ತರಬೇತಿಗಳು, ಸೇವಾ ಮನೋಭಾವನೆ ಮೊದಲಾದ ವಿಚಾರಗಳನ್ನು ಅರಿತುಕೊಳ್ಳಲು ಈ ತರಬೇತಿ ಶಿಬಿರವು ಸಹಕಾರಿಯಾಗಲಿದೆ ಎಂದರು. 

  

ಸ್ಕೌಟ್ಸ್ & ಗೈಡ್ಸ್ ನ ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ,   ರಾಜ್ಯ ಸಂಘಟನಾ ಆಯಕ್ತ ಎಂ.ಪ್ರಭಾಕರ ಭಟ್, ಶಿಬಿರದ ಮೇಲ್ವೀಚಾರಕಿ ಮಲ್ಲೇಶ್ವರಿ ಜುಜಾರೆ, ರಾಜ್ಯ ಸಹಾಯಕ ಸಂಘಟನಾ  ಆಯುಕ್ತ ಭರತ್  ರಾಜ್ ಕೆ., ದ.ಕ.ಜಿಲ್ಲಾ ಕೋಶಾಧಿಕಾರಿ ನವೀನ್ ಚಂದ್ರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

1 Comments