ತೆಂಕುತಿಟ್ಟು ಯಕ್ಷಗಾನದ ಕಲಾವಿದರಾದ ಶ್ರೀ ಉಬರಡ್ಕ ಉಮೇಶ್ ಶೆಟ್ಟಿಯವರಿಗೆ ಸಂಮಾನ

ಜಾಹೀರಾತು/Advertisment
ಜಾಹೀರಾತು/Advertisment

 ತೆಂಕುತಿಟ್ಟು ಯಕ್ಷಗಾನದ ಕಲಾವಿದರಾದ ಶ್ರೀ ಉಬರಡ್ಕ ಉಮೇಶ್ ಶೆಟ್ಟಿಯವರಿಗೆ ಸಂಮಾನ 

           ‌  ತೆಂಕುತಿಟ್ಟಿನ ಹಿರಿಯ ಕಲಾವಿದರಾದ ಶ್ರೀ ಉಬರಡ್ಕ ಉಮೇಶ್ ಶೆಟ್ಟರನ್ನು 10.12.2024 ರಂದು ಮೂಡುಬಿದಿರೆ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ  ಹನುಮಗಿರಿ ಮೇಳದವರ ಯಕ್ಷಗಾನ ವೇದಿಕೆಯಲ್ಲಿ , ಯಕ್ಷಗಾನ ಅಭಿಮಾನಿಗಳು ಮೂಡುಬಿದಿರೆ ವತಿಯಿಂದ ಸಂಮಾನಿಸಲಾಯಿತು . 

ಉಮೇಶ್ ಶೆಟ್ಟರನ್ನು ಅಭಿನಂದಿಸುತ್ತಾ , ಮೂಡುಬಿದಿರೆ ಯಕ್ಷಸಂಗಮದ ಸಂಚಾಲಕ ಶ್ರೀ ಎಂ.ಶಾಂತರಾಮ ಕುಡ್ವರು , " ಅಳಿಕೆ ರಾಮಯ್ಯ ರೈಯವರ ಸೋದರಳಿಯರಾದ ಶೆಟ್ಟರು , ಅಳಿಕೆಯವರ ಪ್ರೇರಣೆ , ಪ್ರೋತ್ಸಾಹದಿಂದಾಗಿ 1972ರಲ್ಲಿ ಧರ್ಮಸ್ಥಳ ಲಲಿತ ಕಲಾಕೇಂದ್ರದ  ಪ್ರಾಥಮಿಕ ಸಾಲಿನ ವಿದ್ಯಾರ್ಥಿಯಾಗಿ ಸೇರಿ , ಧರ್ಮಸ್ಥಳ ಮೇಳಕ್ಕೆ ಸೇರ್ಪಡೆಗೊಂಡು ಯಕ್ಷರಂಗ ಪ್ರವೇಶಿಸಿದರು . ಯಕ್ಷಗಾನದ ಪುಂಡು ವೇಷ , ಸ್ತ್ರೀ ವೇಷ , ರಾಜವೇಷ , ಬಣ್ಣದ ವೇಷ , ಮಹಿಷಾಸುರನಂತಹ ಪಾತ್ರಗಳನ್ನೂ ನಿರ್ವಹಿಸುವ ಪ್ರತಿಭೆ ಉಮೇಶ ಶೆಟ್ಟರದ್ದು . ಸುಪ್ರಸಿದ್ಧ ಕಲಾವಿದರಾದ  ಪುತ್ತೂರು ನಾರಾಯಣ ಹೆಗ್ಡೆ , ಎಂಪೆಕಟ್ಟೆಯವರ ನಂತರದಲ್ಲಿ ಅವರ ಪಾತ್ರಗಳಿಗೆ ಉಮೇಶ್ ಶೆಟ್ಟರು  ಉತ್ತರಾಧಿಕಾರಿಯಾಗಿ ಬೆಳೆಯುವಲ್ಲಿ ಅವರ ಪ್ರತಿಭೆಯನ್ನು ಗುರುತಿಸಬಹುದು . ಧರ್ಮಸ್ಥಳ ಮೇಳದಲ್ಲಿ ನಿರಂತರ 43 ವರ್ಷಗಳ ತಿರುಗಾಟ ನಡೆಸಿದ್ದ ಶೆಟ್ಟರು 2015 ರಲ್ಲಿ ನಿವೃತ್ತಿ ಹೊಂದಿದರೂ , ಹನುಮಗಿರಿ ಮೇಳದಲ್ಲಿ ಅತಿಥಿ ಕಲಾವಿದರಾಗಿ ಕಲಾ ರಸಿಕರನ್ನು ರಂಜಿಸುತ್ತಿರುವುದು ಸಂತಸದ ವಿಚಾರ ‌. ಅವರು ಇನ್ನಷ್ಟು ಸಂಮಾನ - ಪುರಸ್ಕಾರ  ಸ್ವೀಕರಿಸುವಂತೆ ದೇವರು ಕರುಣಿಸಲಿ " ಎಂದು ಹಾರೈಸಿದರು .

            ಮೂಡುಬಿದಿರೆ ಯಕ್ಷಗಾನ ಪೋಷಕರು , ಯಕ್ಷಧ್ರುವ ಪಟ್ಲ ಫೌಂಡೇಶನ್ ( ರಿ ) ಮೂಡುಬಿದಿರೆ ಘಟಕದ ಸಂಚಾಲಕರಾದ ಉದ್ಯಮಿ ಶ್ರೀ ಕೆ.ಪ್ರೇಮನಾಥ ಮಾರ್ಲರ ನೇತೃತ್ವದಲ್ಲಿ ಸಂಮಾನ ಜರುಗಿತು. ಸಂಮಾನ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು  ವೇದಮೂರ್ತಿ ಶ್ರೀ ಕೆ.ಈಶ್ವರ ಭಟ್ ಅಲಂಗಾರ್ , ಉದ್ಯಮಿ ಪುನೀತ್ ಕಟ್ಟೆಮಾರ್ , ಶ್ರೀ ವಿಜಯಲಕ್ಷ್ಮೀ   ಕ್ಯಾಶ್ಯೂ ಇಂಡಸ್ಟ್ರೀಸ್ ನ ಮಾಲಕ ಶ್ರೀ ಎ.ಕೆ.ರಾವ್ , ಯಕ್ಷಗಾನ ಪೋಷಕರಾದ ಶ್ರೀ ರವಿಪ್ರಸಾದ್ ಶೆಟ್ಟಿ , ಶ್ರೀ ಉಮೇಶ್ ಶೆಟ್ಟರು ವೇದಿಕೆಯಲ್ಲಿ ಉಪಸ್ಥಿತರಿದ್ದು ಉಮೇಶ್ ಶೆಟ್ಟರನ್ನು ಸಂಮಾನಿಸಿದರು  . ರವಿಪ್ರಸಾದ್ ಶೆಟ್ಟರು ಧನ್ಯವಾದ ಅರ್ಪಿಸಿದರು .

Post a Comment

0 Comments