"1000 ಕೆರೆಗಳಿಗೆ ಕಾಯಕಲ್ಪ ದ ಗುರಿ : ಡಾ. ಡಿ ವೀರೇಂದ್ರ ಹೆಗ್ಗಡೆ"
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಲ್ಲಿ" ನಮ್ಮೂರು ನಮ್ಮ ಕೆರೆ" ಯೋಜನೆ ಯಡಿ 1000 ಕೆರೆಗಳಿಗೆ ಕಾಯ ಕಲ್ಪ ನೀಡಲು ಉದ್ದೇಶಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ, ರಾಜರ್ಷಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ,ಡಿ. ವೀರೇಂದ್ರ ಹೆಗ್ಡೆ ತಿಳಿಸಿದರು. ಅವರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಶ್ರೀ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 800 ನೇ ಕೆರೆಯಾದ ಚೌಡರಹಳ್ಳಿ ಕೆರೆಯನ್ನು ಸಾಂಕೇತಿಕವಾಗಿ ಮಾಜಿ ಶಾಸಕ ಲಿಂಗೇಶ್ ರವರಿಗೆ ಹಸ್ತಾಂತರಿಸಿ ಮಾತನಾಡಿದರು. ಈ ಹಿಂದೆ ದೇಗುಲಗಳ ಜೀರ್ಣೋದ್ಧಾರ ಮಾಡಿ ಊರಿನ ಏಳಿಗೆ ಆಗಬೇಕೆಂಬುದು ಕ್ಷೇತ್ರ ಬಯಸಿತ್ತು ,ಈಗ ಜನರಿಗೆ ಕೃಷಿಗೆ ,ಪ್ರಾಣಿ ಸಂಕುಲ ಗಳಿಗೆ ನೆರವಾಗಲು ಬಯಸಿದೆ, ಈ ನಿಟ್ಟಿನಲ್ಲಿ ಕೆರೆಗಳ ಪುನಶ್ಚೇತನಕ್ಕೆ ಮುಂದಾಗಿದ್ದು ,ಮುಂದಿನ ದಿನಗಳಲ್ಲಿ ಇನ್ನಷ್ಟು ಕೆರೆಗಳಿಗೆ ಕಾಯಕ ಕಲ್ಪ ನೀಡಲಾಗುವುದು ಎಂದರು.
ಈಗಾಗಲೇ ರಾಜ್ಯದಲ್ಲಿ 800 ಕೆರೆಗಳಿಗೆ ಕಾಯಕಲ್ಪ ನೀಡಲಾಗಿದೆ , 2025 ರ ಏಪ್ರಿಲ್ ಅಂತ್ಯದೊಳಗೆ ಇನ್ನೂ 200 ಕೆರೆಗಳಿಗೆ ಕಾಯಕಲ್ಪ ನೀಡಲು ಉದ್ದೇಶಿಸಲಾಗಿದೆ ಎಂದು ಡಾ. ವೀರೇಂದ್ರ ಹೆಗ್ಗಡೆ ತಿಳಿಸಿದರು.ಕೆರೆಯನ್ನು ರಕ್ಷಿಸಿದರೆ ಪುಣ್ಯ ಬರುತ್ತದೆ, ಸ್ವಚ್ಛ ಪರಿಸರ, ಜಲ ಸಂರಕ್ಷಣೆ ಮಾಡಬೇಕು, ಕೆರೆಯ ಸುತ್ತಲೂ ಹಣ್ಣಿನ ಗಿಡಗಳನ್ನು ಬೆಳೆಸಬೇಕು, ಎಲ್ಲಕ್ಕೂ ಗ್ರಾಮ ಪಂಚಾಯಿತಿ ಹಾಗೂ ಸರ್ಕಾರವನ್ನು ನಿರೀಕ್ಷಿಸದೆ ಗ್ರಾಮಸ್ಥರೇ ಆಸಕ್ತಿ ವಹಿಸಬೇಕು ಎಂದರು.
ಡಾ. ಹೇಮಾವತಿ. ವಿ. ಹೆಗಡೆ ಮಾತನಾಡಿ ಕೆರೆಗಳು ಆಯ ಊರಿನ ಕಲ್ಪವೃಕ್ಷ ವಿದ್ದಂತೆ ,ಸಕಲ ಜೀವರಾಶಿಗಳಿಗೆ ಉಪಯುಕ್ತವಾಗಿದ್ದು, ದೇಗುಲಗಳಲ್ಲಿ ಕ್ಷೇತ್ರ ಪಾಲ ದೇಗುಲವನ್ನು ರಕ್ಷಣೆ ಮಾಡಿದಂತೆ ಕೆರೆ ಸಮಿತಿ ಗ್ರಾಮ ದ ಕೆರೆಗಳನ್ನು ರಕ್ಷಿಸಿ ಕಾಪಾಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಶಿವಾನಂದ ಕಳವೆ ಕೆರೆಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಲಿಂಗೇಶ್ ಕೆರೆ ಸಮಿತಿ ಸದಸ್ಯ ಕಿತ್ತೂರಿನ ಮಲ್ಲಿಕಾರ್ಜುನ್ ಹುದಲಿ, ಗ್ರಾಮ ಅಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಎಸ್ .ಎಸ್ .ಅನಿಲ್ ಕುಮಾರ್ ಉಪಸ್ಥಿತರಿದ್ದರು.
ವರದಿ ,: ಜೆ ರಂಗನಾಥ ತುಮಕೂರು
0 Comments