ಪಡುಮಾರ್ನಾಡಿನಲ್ಲಿ 'ಸಂವಿಧಾನ ಸಂಭ್ರಮ' ಕಾರ್ಯಕ್ರಮ

ಜಾಹೀರಾತು/Advertisment
ಜಾಹೀರಾತು/Advertisment

 ಪಡುಮಾರ್ನಾಡಿನಲ್ಲಿ 'ಸಂವಿಧಾನ ಸಂಭ್ರಮ' ಕಾರ್ಯಕ್ರಮ

ಮೂಡುಬಿದಿರೆ: ತಾಲೂಕಿನ ಪಡುಮಾರ್ನಾಡು ಗ್ರಾಮ ಪಂಚಾಯತ್ ನಲ್ಲಿ ಭಾರತ ಸಂವಿಧಾನವನ್ನು ಅಂಗೀಕರಿಸಿದ 75ನೇ ವರ್ಷವನ್ನು ಅರ್ಥಪೂರ್ಣವಾಗಿ ಸಂಭ್ರಮಿಸಲು ಗ್ರಾಮ ಪಂಚಾಯತ್ ಅರಿವು ಕೇಂದ್ರ ಗಳಲ್ಲಿ ನವಂಬರ್  

26 ರಿಂದ 28 ರ ವರೆಗೆ

 "ಸಂವಿಧಾನ ಸಂಭ್ರಮ " ಕಾರ್ಯಕ್ರಮ ಆಯೋಜಿಸಲಾಗಿತ್ತು.


  ಕಾರ್ಯಕ್ರಮದ 3ನೇ ದಿನವಾದ ಗುರುವಾರದಂದು ಪಡುಮಾರ್ನಾಡು  ಗ್ರಾಮ ಪಂಚಾಯತ್ ಅರಿವು ಕೇಂದ್ರ ಹಾಗೂ ಗ್ರಂಥಾಲಯದಲ್ಲಿ 

ಗ್ರಾಮೀಣ ಸಮುದಾಯದವರಿಗೆ (ಗ್ರಾಮಸ್ಥರು )ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.

 ಸಂವಿಧಾನ ಪೀಠಿಕೆ ಗಟ್ಟಿ ಓದು, ದೇಶ ಭಕ್ತಿ ಗೀತೆ ಹಾಗೂ

 ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ   ಗ್ರಾಮೀಣ ಸಮುದಾಯದವರಿಗೆ (ಗ್ರಾಮಸ್ಥರು )  ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.

ಪಾಡ್ಯಾರು , ಜತನ್ನ, ಆಚರಕಟ್ಟೆ ಶಾಲಾ ಮಕ್ಕಳಿಂದ ಸಂವಿಧಾನದ ಕರಡು ಪ್ರತಿ ಅಂಗೀಕಾರವಾದ ದಿನದ ಹಾಗೂ ಅಧಿವೇಶನದ ಸ್ಕಿಟ್ ನ್ನು ಮಾಡಿಸಲಾಯಿತು.


    ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಹಾಗೂ ಗ್ರಾಮ ಪಂಚಾಯತ್ ಸದಸ್ಯ ತೀರ್ಪುಗಾರ ಪ್ರಶಾಂತ್ ಆಚಾರ್ಯ ಶಾಲಾ ಶಿಕ್ಷಕರು,

ಗ್ರಂಥಾಲಯ ಮೇಲ್ವಿಚಾರಕರು,

ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Post a Comment

0 Comments