ಮೂಡುಬಿದಿರೆ ವಕೀಲರ ಸಂಘದಲ್ಲಿ ಸಂವಿಧಾನ ದಿನಾಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ವಕೀಲರ ಸಂಘದಲ್ಲಿ ಸಂವಿಧಾನ ದಿನಾಚರಣೆ

 ಮೂಡುಬಿದಿರೆ ವಕೀಲರ ಸಂಘದಲ್ಲಿ ಸಂವಿಧಾನ ದಿನಾಚರಣಾ ಕಾರ್ಯಕ್ರಮವನ್ನು ಮೂಡುಬಿದಿರೆ ಹಿರಿಯ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಧೀಶರಾದ  ಮಧುಕರ ಪಿ. ಭಾಗವತ್ ಉದ್ಘಾಟಿಸಿದರು.


ನಂತರ ಮಾತನಾಡಿದ  ಅವರು ಭಾರತದ ಸಂವಿಧಾನದಲ್ಲಿ ನಮೂದಿಸಿದ ಜನರ ಮೂಲಭೂತ ಹಕ್ಕು ಮತ್ತು ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಚಲಾವಣೆಯಲ್ಲಿ ಇರುವ ಇತಿ ಮಿತಿಗಳ ಬಗ್ಗೆ ತಿಳಿಸಿದರು. 


ವಕೀಲರ ಸಂಘದ ಅಧ್ಯಕ್ಷ  ಹರೀಶ್ ಪಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಂವಿಧಾನದ ಆಶಯಗಳಿಗೆ ಪೂರಕವಾಗಿ ವಕೀಲರಾದ ನಾವೆಲ್ಲರೂ ಕರ್ತವ್ಯ ನಿರ್ವಹಿಸೋಣ ಎಂದರು. 


ಕಾರ್ಕಳದ ಹಿರಿಯ ನ್ಯಾಯವಾದಿ  ಪಿ.ಸುಗಂಧ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಭಾರತದ ಸಂವಿಧಾನ ರಚನೆ ಮತ್ತು ಸಂವಿಧಾನ ತಿದ್ದುಪಡಿ ಬಗ್ಗೆ ಮಾತಾನಾಡಿದರು. ವಕೀಲರ ಸಂಘದ ಸೀನಿಯರ್ ಕಮಿಟಿ ಡ್ಯಾರ್‌ಮ್ಯಾನ್ ಆದ  ಎಂ. ಬಾಹುಬಲಿ ಪ್ರಸಾದ್ ಮತ್ತು ಹಿರಿಯ ನ್ಯಾಯಾವಾದಿ ಶ್ರೀ ಕೆ.ಆರ್.ಪಂಡಿತ್ ಸಂಧರ್ಭೋಚಿತವಾಗಿ ಮಾತಾನಾಡಿದರು. ಸಮಾರಂಭದಲ್ಲಿ ಮೂಡುಬಿದಿರೆ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಧೀಶರಾದ  ಕಾವೇರಮ್ಮ ಉಪಸ್ಥಿತರಿದ್ದರು. ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ಸ್ವಾಗತಿಸಿದರು,ದೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಖಜಾಂಜಿ ಆನಂದ ಕೆ.ಎಸ್. ಧನ್ಯವಾದಗೈದರು.

Post a Comment

0 Comments