ಸಮಾಜ ಸೇವಕ ಪ್ರವೀಣ್ ಪೂಜಾರಿಗೆ ಸೇವಾ ರತ್ನ ಪ್ರಶಸ್ತಿ ನೀಡಿದ ಮ್ಯಾಕ್ಸ್‌‌ ಲೈಫ್ ಸಂಸ್ಥೆ

ಜಾಹೀರಾತು/Advertisment
ಜಾಹೀರಾತು/Advertisment

 ಸಮಾಜ ಸೇವಕ ಪ್ರವೀಣ್ ಪೂಜಾರಿಗೆ ಸೇವಾ ರತ್ನ ಪ್ರಶಸ್ತಿ ನೀಡಿದ ಮ್ಯಾಕ್ಸ್‌‌ ಲೈಫ್ ಸಂಸ್ಥೆ


ಬಿಲ್ಲವ ವಾರಿಯರ್ಸ್ ಎಂಬ ಫೇಸ್‍ಬುಕ್ ಪೇಜ್ ಮೂಲಕ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಅಬಲರಿಗೆ, ಶಿಕ್ಷಣದಿಂದ ವಂಚಿತರಿಗೆ ತಮ್ಮ ವತಿಯಿಂದ ಸಹಕಾರ ನೀಡುತ್ತಿದ್ದ ಅನಿವಾಸಿ ಭಾರತೀಯ ಪ್ರವೀಣ್ ಪೂಜಾರಿ ಅವರಿಗೆ ಮ್ಯಾಕ್ಸ್ ಲೈಫ್ ತಂಡದವರು ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದರು.


ಅರಬ್ ದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರವೀಣ್ ಪೂಜಾರಿ ಅವರು ಬಿಲ್ಲವ ವಾರಿಯರ್ಸ್ ಎಂಬ ಫೇಸ್‍ಬುಕ್ ಪೇಜ್ ಮೂಲಕ ಸಮಾಜದ ಪ್ರತಿಭಾನ್ವಿತ ವ್ಯಕ್ತಿಗಳನ್ನು ಸಾಧಕರನ್ನು ಸಮಾಜಕ್ಕೆ ಪರಿಚಯಿಸುವಲ್ಲಿ ಮತ್ತು ಅನೇಕ ಆರ್ಥಿಕವಾಗಿ ಹಿಂದುಳಿದವರಿಗೆ ಸಹಕರಿಸುವುದರಲ್ಲಿ ನಿರಂತರವಾಗಿ ಕಾರ್ಯೋನ್ಮುಖರಾಗಿದ್ದು ಅವರನ್ನು ಮ್ಯಾಕ್ಸ್ ಲೈಫ್ ಸಂಸ್ಥೆಯ ತಂಡದವರು ಅಭಿನಂದಿಸಿದರು.

Post a Comment

0 Comments