*ಡಾ.ರಾ.ಶಿರೂರು ಅವರಿಗೆ ಕರ್ನಾಟಕ ಮುಕುಟಮಣಿ ರಾಜ್ಯ ಪ್ರಶಸ್ತಿ :ಸಾಲಿಗ್ರಾಮ ಗಣೇಶ್ ಶೆಣೈ*
ಮೂಡುಬಿದಿರೆಯ ಹೋಲಿ ರೋಸರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಡಾ.ರಾಮಕೃಷ್ಣ ಶಿರೂರು ಇವರನ್ನು ಕರ್ನಾಟಕ ಮುಕುಟಮಣಿ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಿಸೆಂಬರ್ 1 ರಂದು ದಾವಣಗೆರೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ದಾವಣಗೆರೆಯ ಕಲಾ ಕುಂಚ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷರಾದ ಶ್ರೀ ಸಾಲಿಗ್ರಾಮ ಗಣೇಶ್ ಶೆಣೈ
ಅವರು ತಿಳಿಸಿರುತ್ತಾರೆ.
ಎಂ. ಎ. ಬಿ. ಎಡ್. ಪದವೀಧರರಾದ ಡಾ.ರಾಮಕೃಷ್ಣ ಶಿರೂರು ಹಿಂದಿ ಭಾಷೆಯಲ್ಲಿ ರಾಜ ಭಾಷಾ ವಿದ್ವಾನ್ ಪದವಿಯನ್ನು ಪಡೆದಿರುತ್ತಾರೆ. ಇವರು ಮೂಲತ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಮೇಲ್ಪಂಗ್ತಿಯ ಶಾನುಭೋಗರ ಮನೆತನಕ್ಕೆ ಸೇರಿದ ಶ್ರೀ ಭವಾನಿ ಶಂಕರ ಶಾನುಭೋಗ ಮತ್ತು ಶ್ರೀಮತಿ ಸರೋಜಿನಿ ಶಾನುಭೋಗ ಅವರ ಪುತ್ರ.
1994ರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶ್ರೀಮಂಗಲ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ವರ್ಷ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ,
1995 ರಿಂದ ಮೂಡುಬಿದಿರೆಯ ಹೋಲಿ ರೋಸರಿ ಪ್ರೌಢಶಾಲೆಯಲ್ಲಿ ಕನ್ನಡ ಆಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ.
ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಮತ್ತು ಶಿಕ್ಷಕ ಸಂಘಟನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ
ಇವರಿಂದ ಇನ್ನಷ್ಟು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ಮುಂದುವರೆಯಲಿ ಎಂದು ದಾವಣಗೆರೆಯ ಕಲಾ ಕುಂಚ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷರಾದ ಶ್ರೀ ಸಾಲಿಗ್ರಾಮ ಗಣೇಶ್ ಶೆಣೈ ಅವರು ಡಾ.ರಾಮಕೃಷ್ಣ ಶಿರೂರು ಅವರಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.
0 Comments