ಪಣಪಿಲದಲ್ಲಿ ಆಧಾರ್ ನೋಂದಣಿ ಹಾಗೂ ಸಮಗ್ರ ರಕ್ಷಣಾ ಯೋಜನಾ ಅಭಿಯಾನ
ವಿ.ಎಸ್. ಅರೆಂಜರ್ಸ್ ಅಳಿಯೂರು ಇವರ ವತಿಯಿಂದ ಮತ್ತು ಭಾರತೀಯ ಅಂಚೆ ಇಲಾಖೆ ಇದರ ಸಹಭಾಗಿತ್ವದಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಮತ್ತು ಸಮಗ್ರ ರಕ್ಷಣಾ ಯೋಜನೆಯ ಅಭಿಯಾನವು ಪಣಪಿಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ನಡೆಯಿತು.
ಭಾರತೀಯ ಅಂಚೆ ಇಲಾಖೆ ಪುರಸ್ಕೃತ ವಿವಿಧ ಯೋಜನೆಗಳು ಅಂದರೆ ಅಪಘಾತ ವಿಮೆ, ಶಾಶ್ವತ ವೈಖಲ್ಯ, ಸಂಪೂರ್ಣ ವೈಕಲ್ಯ ವಿಮೆ, ಭಾಗಶಃ ವೈಕಲ್ಯ, ಶಿಕ್ಷಣ ನೀತಿ, ಒಳರೋಗಿ ವೆಚ್ಚ, ಆಕಸ್ಮಿಕ ಆಸ್ಪತ್ರೆ ನಗದು, ಹೊರರೋಗಿ ವೆಚ್ಚ ಸೇರಿದಂತೆ ಅನೇಕ ಯೋಜನೆಗಳ ಕಾರ್ಯಾಗಾರವು ನಡೆದಿದ್ದು ಆಧಾರ್ ತಿದ್ದುಪಡಿ ಮತ್ತು ನೋಂದಣಿ ಕಾರ್ಯಕ್ರಮ ನಡೆದಿದ್ದು ನೂರಕ್ಕೂ ಅಧಿಕ ಮಂದಿ ಈ ಸೇವೆಯನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಬೇಲೊಟ್ಟು, ವಿ.ಎಸ್.ಎರೇಂಜರ್ಸ್ ಮಾಲೀಕರಾದ ರಮಾನಾಥ ಸಾಲಿಯಾನ್, ಯುವರಾಜ್ ಹೆಗ್ಡೆ, ಗ್ರಾಮ ಪಂಚಾಯತ್ ಸದಸ್ಯರಾದ ಮುನಿರಾಜ್ ಹೆಗ್ಡೆ, ದೀಕ್ಷಿತ್ ಪಣಪಿಲ, ಜನಿತ ಮತ್ತು ಭಾರತೀಯ ಅಂಚೆ ಇಲಾಖೆಯ ಅಧಿಕಾರಿ ಗುರುಪ್ರಸಾದ್ ಸೇರಿದಂತೆ ಇತರೆ ಪ್ರಮುಖರು ಉಪಸ್ಥಿತರಿದ್ದರು.
ಅಶ್ವಥ್ ಪಣಪಿಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
0 Comments