ಶಿರ್ತಾಡಿಯಲ್ಲಿ ವಿಶ್ವಶಾಂತಿ ಯಾಗ:ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಸಮಿತಿ
ಶಿರ್ತಾಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಇದರ ಆಶ್ರಯದಲ್ಲಿ ನವಂಬರ್ 10ರಂದು ನಡೆಯಲಿರುವ ಐತಿಹಾಸಿಕ ವಿಶ್ವಶಾಂತಿ ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆಯು ಇಂದು ಬ್ರಹ್ಮಶ್ರೀ ಶ್ರೀ ನಾರಾಯಣ ಗುರು ಸೇವಾ ಸಂಘ ಸಭಾಭವನ ಶಿರ್ತಾಡಿ ಇಲ್ಲಿ ನೆರವೇರಿತು.
ಸಂಘದ ಅಧ್ಯಕ್ಷರಾದ ಶ್ರೀ ಸೋಮನಾಥ ಶಾಂತಿ ಇವರ ನೇತೃತ್ವದಲ್ಲಿ ನಡೆದ ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ ಹಿರಿಯರಾದ ಪಿಕೆ ರಾಜು ಪೂಜಾರಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ರುಕ್ಕಯ್ಯ ಪೂಜಾರಿ, ಶ್ರೀ ನಾಬಿರಾಜ್, ಶ್ರೀ ಪದ್ಮನಾಭ ಕೋಟ್ಯಾನ್, ಶ್ರೀ ಅಶೋಕ್ ಮಾಂಟ್ರಾಡಿ, ವಿಶ್ವಶಾಂತಿಯಾಗದ ಸಂಚಾಲಕರಾದ ಶ್ರೀ ವಿಶ್ವನಾಥ ಕೋಟ್ಯಾನ್, ಶಿರ್ತಾಡಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಸಂತೋಷ್ ಕೋಟ್ಯಾನ್ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
0 Comments