ಅಮನ್ ಪ್ರಿಯಾಂಶ್ ಗೆ ಉಡುಪಿ ಭಂಡಾರಿ ಸಮಾಜ ಸಂಘದಿಂದ ಸನ್ಮಾನ
ಮೂಡುಬಿದಿರೆ : ಕಳೆದ ಪಿ.ಯು.ಸಿ. ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶೇ. 99 ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದಲ್ಲಿ 5ನೇ ಸ್ಥಾನ ಪಡೆದಿದ್ದ ಮೂಡುಬಿದಿರೆ ಆಳ್ವಾಸ್ ಪಿ.ಯು. ಕಾಲೇಜಿನ ವಿದ್ಯಾರ್ಥಿ ಅಮನ್ ಪ್ರಿಯಾಂಶ್ ಅವರನ್ನು ಉಡುಪಿಯ ಭಂಡಾರಿ ಸಮಾಜ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮೂಡುಬಿದಿರೆ ಪುರಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಕುಮಾರ್- ಶಾಲಿನಿ ದಂಪತಿಯ ಪುತ್ರ ಅಮನ್ ಪ್ರಿಯಾಂಶ್ ಅವರು ಪಿ.ಯು.ಸಿ. ಪರೀಕ್ಷೆಯ ರಸಾಯನ ಶಾಸ್ತ್ರ, ಗಣಿತ, ಕಂಪ್ಯೂಟರ್ ಸೈನ್ಸ್ ಮತ್ತು ಸಂಸ್ಕೃತದಲ್ಲಿ ಶೇ. 100 ಅಂಕ ಪಡೆದಿದ್ದರು.ಉಡುಪಿ ತಾಲೂಕು ಭಂಡಾರಿ ಸಮಾಜ ಸಂಘ (ರಿ.) ಇದರ ಅಧ್ಯಕ್ಷ ಗುರುದಾಸ ಭಂಡಾರಿ ಹಿರೇಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ನಡೆದ ಸಂಘದ ಮಹಾಸಭೆ ಮತ್ತು ಶೈಕ್ಷಣಿಕ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು. ಕುಚ್ಚೂರು ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ್ ಕರಾವಳಿ ಬೆಂಗಳೂರು, ಉಡುಪಿ ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಭಂಡಾರಿ ಮಹಾಮಂಡಳದ ಅಧ್ಯಕ್ಷ ಶಶಿಧರ ಭಂಡಾರಿ ಕಾರ್ಕಳ, ಉಚ್ಚ ನ್ಯಾಯಾಲಯದ ವಕೀಲ ಶೇಖರ ಎಸ್. ಭಂಡಾರಿ, ಅಂಚೆ ಇಲಾಖೆಯ ನಿವೃತ್ತ ಅಧಿಕಾರಿ ಬಿ.ಎಸ್. ಭಂಡಾರಿ ಕಾಡಬೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಸಾದ್ ಭಂಡಾರಿ ಮೂಡುಬಿದಿರೆ, ಸಂಘದಪದಾಧಿಕಾರಿಗಳಾದ ಪ್ರಶಾಂತ ಭಂಡಾರಿ, ಪ್ರಭಾಕರ ಭಂಡಾರಿ, ತಮ್ಮಯ್ಯ ಭಂಡಾರಿ, ಜ್ಯೋತಿ ಭಾಸ್ಕರ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು .
0 Comments