ಕಿಡ್ನಿ ಸಮಸ್ಯೆ : ಚಿಕಿತ್ಸೆಗೆ ಸಹಾಯಹಸ್ತ ನೀಡಿದ ಸಾಯಿ ಮಾರ್ನಾಡ್

ಜಾಹೀರಾತು/Advertisment
ಜಾಹೀರಾತು/Advertisment

 ಕಿಡ್ನಿ ಸಮಸ್ಯೆ : ಚಿಕಿತ್ಸೆಗೆ ಸಹಾಯಹಸ್ತ ನೀಡಿದ ಸಾಯಿ ಮಾರ್ನಾಡ್

 ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು ಇದರ 41ನೇ ಸೇವಾ ಯೋಜನೆಯ ಅಂಗವಾಗಿ

ಪಡುಮಾರ್ನಾಡ್ ಗ್ರಾಮದ ನಾರಾಯಣ ಶೆಟ್ಟಿ ಎಂಬವರಿಗೆ ಅರೋಗ್ಯದ ಸಮಸ್ಯೆಯಿದ್ದು ಆಗಸ್ಟ್ ತಿಂಗಳ 2 ನೇ ಸೇವಾ ಯೋಜನೆಯನ್ನು ಹಸ್ತಾಂತರಿಸಲಾಯಿತು.


ಪಡುಮಾರ್ನಾಡ್ ಗ್ರಾಮದ ಅಮನಬೆಟ್ಟು ಪರಿಸರದ ನಾರಾಯಣ ಶೆಟ್ಟಿ ಎಂಬವರ ಎರಡೂ ಕಿಡ್ನಿ ವ್ಯೆಫಲ್ಯ ಹೊಂದಿದ್ದು ಕೆಎಂಸಿ ಆಸ್ಪತ್ರೆಯಲ್ಲಿ  2ಲಕ್ಷ ಖರ್ಚು ಆಗಿದ್ದು, ಈಗ ವೆನ್ಲಾಕ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ 

ಇವರಿಗೆ ಡಯಾಲಿಸಿಸ್ ಮಾಡಲು ಹಣದ ಸಮಸ್ಯೆಯಿದ್ದು ಇದನ್ನು ಮನಗಂಡ ಸಾಯಿ ಮಾರ್ನಾಟ್ ಸಂಘಟನೆಯು ಸಹಾಯಹಸ್ತ ನೀಡಿ ಚಿಕಿತ್ಸೆಗೆ ಸ್ಪಂದಿಸಿದೆ. 

ನಾರಾಯಣ ಶೆಟ್ಟಿ ಅವರಿಗೆ ಪತ್ನಿ ಇದ್ದಾರೆ. ಇಬ್ಬರು ಹೆಣ್ಣು ಮಕ್ಕಳಿದ್ದು ಒಬ್ಬಳು ಕಾಲೇಜು ಮತ್ತು ಇನ್ನೊಬ್ಬಾಕೆ ಹೈಸ್ಕೂಲ್  ಶಿಕ್ಷಣವನ್ನು  ಪಡೆಯುತ್ತಿದ್ದಾಳೆ.

Post a Comment

0 Comments