ಭಾಷೆ ಬೆಳೆಯದೆ ಜನ ಬೆಳೆಯುವುದಿಲ್ಲ : ಡಾ.ಅಶೋಕ್ ಕ್ಲಿಫಡ್ ೯ ಡಿ"ಸೋಜ
ಮೂಡುಬಿದಿರೆ: ಭಾಷೆ ಸಂಸ್ಕೃತಿಗಳನ್ನು ಬೆಳೆಸಿಕೊಳ್ಳದ ಜನಾಂಗ ಆಂತರಿಕ ಚೈತನ್ಯವನ್ನು ಕಳೆದುಕೊಳ್ಳುತ್ತದೆ. ಈ ದೇಶದ ಮಣ್ಣ ಕಣಕಣದಲ್ಲೂ ಭಾಷೆಯ ಸೌಂದರ‍್ಯವಿದೆ. ಎಲ್ಲಿಯವರೆಗೆ ಭಾಷೆ ಜನಜೀವನವನ್ನು ತುಂಬಿಕೊಳ್ಳುವುದಿಲ್ಲವೋ ಅಲ್ಲಿಯತನಕ ಜನರ ಭಾವ ಬರಡಾಗುತ್ತದೆ. ಪ್ರತಿಯೊಂದು ಭಾಷೆಯೂ ಒಂದೊಂದು ವರ. ಹಿಂದಿ ಭಾಷೆ ರಾಷ್ಟ್ರವನ್ನು ಜೋಡಿಸುವ ಭಾಷೆ ಎಂದು ಭುವನೇಂದ್ರ ಕಾಲೇಜಿನ ಹಿಂದಿ ಉಪನ್ಯಾಸಕ ಡಾ.ಅಶೋಕ್ ಕ್ಲಿಫರ್ಡ್ ಡಿಸೋಜಾ ಹೇಳಿದರು.
ಅವರು ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಹಿಂದಿ ಉತ್ಸವ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಅಧ್ಯಪಕ ನವೀನ್, ಸುಪ್ರಿಯಾ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕಿ ಉಪನ್ಯಾಸಕಿ ದಿವ್ಯಲಕ್ಷ್ಮೀ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರ್ಷಲ್ ಸ್ವಾಗತಿಸಿದರು. ಮುಕ್ತಾ ಕಾರ್ಯಕ್ರಮ ನಿರೂಪಿಸಿದರು. ನವ್ಯಾ ವಂದಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ಕವ್ವಾಲಿ ಗಝಲ್‌ಗಳು ಪ್ರಸ್ತುತಿಗೊಂಡವು.

 



 
 
 
0 Comments