ಮಳೆ ಹಾನಿ : ನೀರಿನಲ್ಲಿ ಕೊಚ್ಚಿ ಹೋದ ದನಗಳು
ಮೂಡುಬಿದಿರೆ: ಗುರುವಾರ ರಾತ್ರಿ ಸುರಿದ ವಿಪರೀತ ಮಳೆಗೆ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಡೆಂಜಾರುವಿನ ಪ್ರಕಾಶ್ ಎಂಬವರ ಮನೆಯ ಕೊಟ್ಟಿಗೆಯಲ್ಲಿದ್ದ 5 ದನಗಳು ನೀರಿನಲ್ಲಿ ಕೊಚ್ಚಿಹೋಗಿದ್ದು ಅದರಲ್ಲಿ 1 ದನ ಅಸುನೀಗಿದೆ.
2 ದನಗಳು ವಾಪಾಸು ಬಂದಿದ್ದು ಇನ್ನೆರಡು ದನಗಳು ಕಾಣೆಯಾಗಿರುತ್ತದೆ.
ಸ್ಥಳಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲೊಕೇಶ್ ಬಿ., ಸಹಾಯಕ ನಿರ್ದೇಶಕರು(ಗ್ರಾ.ಉ), ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ, ಉಪಾಧ್ಯಕ್ಷೆ ಸುಶೀಲಾ ಸದಸ್ಯರು, ಗ್ರಾಮ ಕರಣಿಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಹಾಗೂ ಪಂಚಾಯತ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.
1 Comments
ಗ್ರಾಮಕರಣಿಕ ಅಲ್ಲ.. ಸರಕಾರ ಮಟ್ಟದಿಂದ ಗ್ರಾಮ ಆಡಳಿತ ಅಧಿಕಾರಿ ಅಂತ ಬದಲಾಗಿದೆ
ReplyDelete