ಜೇಸಿಐನಿಂದ ವಿದ್ಯಾರ್ಥಿಗಳಿಗೆ ಎಂಪವರಿಂಗ್ ಯೂತ್ ತರಬೇತಿ
ಮೂಡುಬಿದಿರೆ: ಜೆಸಿಐ ಮೂಡುಬಿದಿರೆ ತ್ರಿಭುವನ್ ವತಿಯಿಂದ ಎಂಪವರಿಂಗ್ ಯೂಥ್ ತರಬೇತಿಯು ಮೂಡುಮಾರ್ನಾಡಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಮೂಡುಬಿದಿರೆ ತ್ರಿಭುವನ್ ನ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಸಿಐ ನ ವಲಯ ತರಬೇತುದಾರ ಪ್ರೊಫೆಸರ್ ಎಸ್ ಪಿಅಜಿತ್ ಪ್ರಸಾದ್ ವಿದ್ಯಾರ್ಥಿಗಳಿಗೆ ಪ್ರೇರೇಪಣಾ ಉಪನ್ಯಾಸ ನೀಡಿ ಮಾತನಾಡಿ
ವಿದ್ಯಾರ್ಥಿ ಗಳು ಮುಂದಿನ ಭವಿಷ್ಯದ ದಿನಗಳಲ್ಲಿ ಜೇವನದ ಸವಾಲುಗಳ್ಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಹಲವಾರು ಉದಾಹರಣೆ ಮೂಲಕ ಮಾಹಿತಿ ನೀಡಿದರು.
ಮುಖ್ಯ ಶಿಕ್ಷಕಿ ಡಾ. ರಾಜಶ್ರೀ ಬಿ ಸ್ವಾಗತಿಸಿದರು. ದೈಹಿಕ ಶಿಕ್ಷಕರಾದ ನವೀನ್ ಪುತ್ರನ್ ವಂದಿಸಿದರು. ಜೆ ಸಿ ಐ ಉಪಸ್ಥಿತರಿದ್ದರು.
0 Comments