ಮೂಡುಬಿದರೆ ಲಯನ್ಸ್ - ಜಿಲ್ಲೆಗೆ ಪ್ರಥಮ
2023 24ನೇ ಸಾಲಿನಲ್ಲಿ ಕೈಗೊಂಡಿರುವ ಅತ್ಯುತ್ತಮ ಸೇವಾ ಕಾರ್ಯಗಳು, ಸದಸ್ಯತ್ವ ಅಭಿಯಾನ, ಅಂತರಾಷ್ಟ್ರೀಯ ಲಯನ್ಸ್ ಗೆ ನೀಡಿರುವ ಗುರುತರವಾದ ದೇಣಿಗೆ, ಲಿಯೋಕ್ಲಬ್ ಸ್ಥಾಪನೆ, ಹೀಗೆ ಎಲ್ಲಾ ಹಂತಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮೂಡುಬಿದರೆ ಲಯನ್ಸ್ ಕ್ಲಬ್ ಸೀನಿಯರ್ ಕ್ಲಬ್ ಕೆಟಗರಿಯಲ್ಲಿ ಜಿಲ್ಲಾ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮುಲ್ಕಿಯ ಸುಂದರರಾಮ ಶೆಟ್ಟಿ ಸಭಾಭವನದಲ್ಲಿ ಜುಲೈ 06 ರಂದು ಸಂಜೆ ನಡೆದ ಲಯನ್ಸ್ ಜಿಲ್ಲೆ 317. ಡಿ ಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಮೇಲ್ವಿನ್ ಡಿಸೋಜಾ ಅವರಿಂದ ಮೂಡುಬಿದ್ರಿ ಲಯನ್ಸ್ ಕ್ಲಬ್ ಬೆಳ್ತಂಗಡಿ ಲಯನ್ಸ್ ಕ್ಲಬ್ ನೊಂದಿಗೆ ಜಂಟಿಯಾಗಿ ಪ್ರಥಮ ಪ್ರಶಸ್ತಿಯನ್ನು ಸ್ವೀಕರಿಸಿತು. ಅತ್ಯುತ್ತಮ ಕ್ಲಬ್, ಅತ್ಯುತ್ತಮ ಅಧ್ಯಕ್ಷ , ಅತ್ಯುತ್ತಮ ಕಾರ್ಯದರ್ಶಿ ಮತ್ತು ಅತ್ಯುತ್ತಮ ಕೋಶಾಧಿಕಾರಿ, ಸರಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನ ಮಾಡುವಲ್ಲಿ ಸಹಕಾರ, ಸೂರಿಲ್ಲದವರಿಗೆ ಸೂರು ನಿರ್ಮಾಣ ,ಶಿಕ್ಷಣಕ್ಕಾಗಿ ಸಹಾಯ ಅಂಗಾಂಗ ದಾನ ವಿಭಾಗದಲ್ಲಿ ಪ್ರಥಮ ಸಹಿತ ಒಟ್ಟು 27 ಕ್ಯಾಟಗರಿಗಳ ಪೈಕಿ 24 ರಲ್ಲಿ ಪ್ರಥಮ ಸ್ಥಾನವನ್ನು ನಾಲ್ಕು ಕಂದಾಯ ಜಿಲ್ಲೆಗಳನ್ನು ಒಳಗೊಂಡ ಲಯನ್ಸ್ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ವಲಯ್ಯಾಧ್ಯಕ್ಷ ಪ್ರಶಸ್ತಿಯು ಮೂಡುಬಿದರಿ ಲಯನ್ಸ್ ಕ್ಲಬ್ಬಿನ ಲಯನ್ ದಿನೇಶ್ ಎಂ. ಕೆ. ಅವರಿಗೆ ದೊರೆತಿರುತ್ತದೆ. ಲಯನ್ಸ್ ಅಧ್ಯಕ್ಷರಾದ ಲಯನ್ ಜೋಸ್ಸಿ ಮೆನೇಜಸ್, ಲಯನ್ ಕಾರ್ಯದರ್ಶಿಗಳಾದ ಒಸ್ವಾಲ್ಡ್ ಡಿಕೋಸ್ಟ, ಕೋಶಾಧಿಕಾರಿಗಳಾದ ಲಯನ್ ಹರೀಶ್ ತಂತ್ರಿ, ವಲಯಾಧ್ಯಕ್ಷರಾದ ಲಯನ್ ದಿನೇಶ್. ಎಂ. ಕೆ., ನಿಯೋಜಿತ ಅಧ್ಯಕ್ಷರಾದ ಲಯನ್ ಬೋನವೆಂಚರ್ ಮೆನೇಜಸ್ ಹಾಗೂ ಕ್ಲಬ್ಬಿನ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಶ್ರೀಮತಿ ಸ್ಮಿತಾ ಡಿಸೋಜ ರವರು ಉಪಸ್ಥಿತರಿದ್ದರು.
0 Comments