ಮಳೆ ಹಾನಿ: ಮಾಂಟ್ರಾಡಿಯಲ್ಲಿ ಭಾಗಶ: ಕುಸಿದ ಮನೆ
ಮೂಡುಬಿದಿರೆ: ತಾಲೂಕಿನಲ್ಲಿ ಬುಧವಾರ ಸುರಿದ ಮಳೆಯಿಂದಾಗಿ ಮಾಂಟ್ರಾಡಿ ಗ್ರಾಮದ ವಸಂತಿ ಕೋಂ ಮಹಾಬಲ ಪೂಜಾರಿ ಇವರ ವಾಸದ ಮನೆಯು ಭಾಗಶ: ಕುಸಿದು ಹಾನಿಯಾಗಿದೆ.
ಈ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಳೆಯು ಮತ್ತಷ್ಟು ತೀವ್ರಗೊಂಡಿದ್ದರಿಂದ ಅಪಾಯದಿಂದ ಮನೆಯ ಗೋಡೆ ಬೀಳುವ ಸಂಭವ ಇರುವುದರಿಂದ ಈ ಬಗ್ಗೆ ಅಪಾಯ ಅರಿತು ವಸಂತಿ ಹಾಗೂ ಸದಸ್ಯರನ್ನು ಪಂಚಾಯತ್ ನ ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರ ವಾಗಲು ಲಿಖಿತ ವಾಗಿ ನೋಟೀಸ್ ನೀಡಿದರು.
ಮನೆಯ ಯಜಮಾನಿ ವಸಂತಿ ಅವರು ತನ್ನ ಮಗ ಗಣೇಶ ಪೂಜಾರಿ ಮನೆಯಲ್ಲಿ ವಾಸವಾಗುತ್ತೇನೆ ಎಂದು ತಿಳಿಸಿದ್ದರಿಂದ ಸದ್ಯ ವಸಂತಿ ಮತ್ತಿತರರು ಸ್ಥಳಾಂತರ ಆಗಿರುತ್ತಾರೆ.
0 Comments