*ಮೂಡುಬಿದಿರೆಯಲ್ಲಿ ಪೌರಕಾರ್ಮಿಕರಿಗೆ ಸನ್ಮಾನ*

ಜಾಹೀರಾತು/Advertisment
ಜಾಹೀರಾತು/Advertisment

 *ಮೂಡುಬಿದಿರೆಯಲ್ಲಿ ಪೌರಕಾರ್ಮಿಕರಿಗೆ ಸನ್ಮಾನ*


ಮಹಾರಾಷ್ಟ್ರದ ಸಂತರಾದ ಶ್ರೀಗೊಂದೇವಾಲೇಕರ್ ಅವರ ಪುಣ್ಯಸ್ಮರಣೆಯ ಅಂಗವಾಗಿ ಅಶ್ವತ್ಥಪುರದ ಶ್ರೀ ಕೃಷ್ಣಮೂರ್ತಿ ಭಟ್ ಅವರು ಮೂಡುಬಿದಿರೆ ಪುರಸಭೆಯ ಎಲ್ಲಾ ಪೌರಕಾರ್ಮಿಕರನ್ನು ಸೀರೆ ಮತ್ತು ಪಂಚೆ ಮತ್ತು ಶ್ರೀ ರಾಮಚಂದ್ರ ದೇವರ ಭಾವಚಿತ್ರವನ್ನು ದಕ್ಷಿಣೆ ಸಹಿತವಾಗಿ  ನೀಡಿ ಗೌರವಿಸಿದರು.


ಮೂಡುಬಿದಿರೆಯ ಪುರಸಭೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯ ಅಧಿಕಾರಿಗಳಾದ ಶ್ರೀಮತಿ ಇಂದು ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಅಶ್ವತ್ತಪುರದ ಕೃಷ್ಣಮೂರ್ತಿ ಭಟ್ಟರು ತಮ್ಮ ದುಡಿಮೆಯ ಒಂದು ಭಾಗವನ್ನು ತಮ್ಮ ಗುರುಗಳ ನೆನಪಿನಲ್ಲಿ ಸಮಾಜ ಸೇವೆ ಮಾಡುತ್ತಿರುವ ಪೌರಕಾರ್ಮಿಕರನ್ನು ಗೌರವಿಸುವ ಚಿಂತನೆ ಮಾಡಿದರು. ಇವರ ಈ ಸಮಾಜಮುಖಿ ಚಿಂತನೆಯ ನಡೆ ನಮಗೆಲ್ಲರಿಗೂ ಮಾರ್ಗದರ್ಶಕವಾಗಿದೆ ಆದರ್ಶಪ್ರಾಯವಾದುದಾಗಿದೆ. ಸಮಾಜಕ್ಕಾಗಿ ಬದುಕುವ, ಸಮಾಜದ ಒಳಿತಿಗಾಗಿ ದುಡಿಯುವ ಜನರನ್ನು ಗೌರವಿಸುವ ವಿಶಿಷ್ಟ ಪರಂಪರೆಗೆ ಇವರು ನಾಂದಿ ಹಾಡಿದರು. ಇನ್ನಷ್ಟು ಸಮಾಜ ಸೇವೆ ಇವರಿಂದ ನಡೆಯಲಿ.  ಇಂತಹ ನಿಸ್ವಾರ್ಥ ಮನಸ್ಸನ್ನು ಹೊಂದಿರುವ ಇವರ ಜೀವನ ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಅಧ್ಯಾಪಕ ಡಾ.ರಾಮಕೃಷ್ಣ ಶಿರೂರು ಅವರು ಮಹಾರಾಷ್ಟ್ರದ ಗೊಂದೇ ವಾಲೇಕರ್ ಗುರುಗಳ ಮಹಿಮೆಯನ್ನು ತಿಳಿಸುತ್ತಾ, ಅವರ ಶಿಷ್ಯರಾದ ಬ್ರಹ್ಮಾನಂದ ಗುರೂಜಿಯವರಿಂದ  ಅಶ್ವತ್ತ ಪುರದಲ್ಲಿ ಶ್ರೀರಾಮಚಂದ್ರ ದೇವಾಲಯ ಸ್ಥಾಪನೆಯ ಹಿನ್ನೆಲೆಯ ಕುರಿತು ತಿಳಿಸಿದರು. ಕೃಷ್ಣಮೂರ್ತಿ ಭಟ್ಟರ ಉದಾರ ಮನಸ್ಸನ್ನು ಕೊಂಡಾಡಿದರು.ಪುರಸಭೆಯ ಸದಸ್ಯರಾದ ಶ್ರೀ ಕೊರಗಪ್ಪ ಅವರು ಸಮಯೊಚಿತವಾಗಿ ಮಾತನಾಡಿದರು. ಪುರಸಭೆಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಮತಿ ಚಂದ್ರಾವತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 120 ಪೌರಕಾರ್ಮಿಕರನ್ನು ಅತ್ಯಂತ ಆತ್ಮೀಯವಾಗಿ, ಗೌರವದಿಂದ ಅಭಿನಂದಿಸಲಾಯಿತು. ಕಾರ್ಯಕ್ರಮದ ರೂವಾರಿಗಳಾದ ಅಶ್ವತಪುರ ಶ್ರೀ ಕೃಷ್ಣಮೂರ್ತಿಯವರು ಕಾರ್ಯಕ್ರಮದ ಉದ್ದೇಶವನ್ನು ತಿಳಿಸುತ್ತಾ ತಮ್ಮ ಗುರುಗಳ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಗೌರವಿಸಬೇಕೆಂದು ಸಂಕಲ್ಪ ಮಾಡಿದ್ದೆ. ಅದು ಗುರುಗಳ ಆಶೀರ್ವಾದದಿಂದ ಎಲ್ಲರ ಸಹಕಾರದಿಂದ ಸಾಧ್ಯವಾಯಿತು. ಇನ್ನಷ್ಟು ಸಮಾಜ ಸೇವೆಯನ್ನು ಮಾಡುವ ಭಾಗ್ಯ ತನ್ನ ಪಾಲಿಗೆ ಬರಲಿ. ಇಂದಿನ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿಕೊಟ್ಟ ಮೂಡುಬಿದಿ ರೆ ಪುರಸಭೆಯ ಮುಖ್ಯ ಅಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಹಾಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಪುರಸಭೆಯ ಸದಸ್ಯರಾಗಿರುವ ಶ್ರೀ ಕೊರಗಪ್ಪ ಅವರಿಗೆ ಧನ್ಯವಾದ ಸಲ್ಲಿಸಿದರು. ಆರೋಗ್ಯ ತಪಾಸಣಾ ಧಿಕಾರಿಗಳಾಗಿ ಶ್ರೀಮತಿ ಚಂದ್ರಾವತಿ ಅವರಿಗೆ, ಅಧ್ಯಾಪಕ ಡಾ.ರಾಮಕೃಷ್ಣ ಶಿರೂರು ಅವರಿಗೆ  ಮತ್ತು ಎಲ್ಲಾ ಪೌರಕಾರ್ಮಿಕ ಬಂಧುಗಳಿಗೆ ಧನ್ಯವಾದ ಸಲ್ಲಿಸಿದರು.

Post a Comment

0 Comments