ಬೋರುಗುಡ್ಡೆ: ಮನೆ ಕುಸಿದು ಬಿದ್ದು ವೃದ್ಧೆ ಸಾವು

ಜಾಹೀರಾತು/Advertisment
ಜಾಹೀರಾತು/Advertisment

 ಬೋರುಗುಡ್ಡೆ: ಮನೆ ಕುಸಿದು ಬಿದ್ದು ವೃದ್ಧೆ ಸಾವು

ಮೂಡುಬಿದಿರೆ: ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದ ಪರಿಣಾಮವಾಗಿ  ವೃದ್ಧೆಯೋರ್ವರು ಸಾವನ್ನಪ್ಪಿದ ಘಟನೆ ಮೂಡುಬಿದಿರೆ ತಾಲೂಕಿನ ಬೋರುಗುಡ್ಡೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.


ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರುಗುಡ್ಡೆ ಜನತಾ ಕಾಲನಿಯ ನಿವಾಸಿ ಪರಿಶಿಷ್ಟ ಜಾತಿಯ ಗೋಪಿ (80ವ)  ಮೃತಪಟ್ಟ ವೃದ್ಧೆ. 


ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗೋಪಿ ಅವರ ಮನೆಯು ಸೋರುತ್ತಿತ್ತು. ಇದಕ್ಕೆ ತರ್ಪಾಲು ಹಾಕಲೆಂದು ಮಕ್ಕಳು ಹೊರಗಡೆ ಬಂದಿದ್ದರು ಈ ಸಂದರ್ಭ ಮನೆಯು ಸಂಪೂರ್ಣ  ಕುಸಿದು ಬಿದ್ದಿದ್ದು ಮನೆಯೊಳಗಡೆಯಿದ್ದ ಗೋಪಿ ಅವರಿಗೆ ತೀವೃ ತರಹದ ಗಾಯಗಳಾಗಿದ್ದು ಅವರನ್ನು ಕಾರ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗೋಪಿ ಅವರು ಗುರುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

Post a Comment

0 Comments